ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಘೋಷಣೆ – ಕನ್ನಡದ ಚಾರ್ಲಿ777ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಘೋಷಣೆ – ಕನ್ನಡದ ಚಾರ್ಲಿ777ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

ನವದೆಹಲಿ: 69ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಅತ್ಯುತ್ತಮ ಕನ್ನಡ ಚಿತ್ರವಾಗಿ ‘ಚಾರ್ಲಿ 777’ ಆಯ್ಕೆಯಾಗಿದೆ.

‘ಕಡೈಸಿ ವ್ಯವಸಾಯಿ’ ಅತ್ಯುತ್ತಮ ತಮಿಳು ಚಿತ್ರವಾಗಿ ಆಯ್ಕೆಯಾಗಿದ್ದು, ತೆಲುಗಿನ ‘ಉಪ್ಪೇನ’ ಮತ್ತು ಮಲಯಾಳಂನ ‘ಹೋಮ್’ ಅತ್ಯುತ್ತಮ ಚಿತ್ರಗಳಾಗಿ ಆಯ್ಕೆಯಾಗಿವೆ. ‘ಗಂಗೂಬಾಯಿ ಕಥಿವಾಡಿ’ ಮತ್ತು ‘ಮಿಮಿ’ ಚಿತ್ರಗಳಿಗಾಗಿ ಆಲಿಯಾ ಭಟ್ ಮತ್ತು ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

‘ಪುಷ್ಪ – ದಿ ರೈಸ್’ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ರಾಕೆಟ್ರಿ – ದಿ ನಂಬಿ ಎಫೆಕ್ಟ್’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನರ್ಗಿಸ್ ದತ್ ಪ್ರಶಸ್ತಿಗೆ ಭಾಜನವಾಗಿದೆ. ಆರೋಗ್ಯಕರ ಮನೋರಂಜನೆಯನ್ನು ಒದಗಿಸುವ ಅತ್ಯುತ್ತಮ ಚಿತ್ರವಾಗಿ ‘ಆರ್.ಆರ್.ಆರ್.’ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಎಸ್.ಎಸ್. ರಾಜಮೌಳಿ ಅವರ ‘ಆರ್.ಆರ್.ಆರ್’ ಚಿತ್ರ ಅತ್ಯುತ್ತಮ ಸಾಹಸ ನಿರ್ದೇಶನ, ನೃತ್ಯ ಸಂಯೋಜನೆ ಮತ್ತು ಸ್ಪೆಷಲ್ ಎಫೆಕ್ಟ್ ಗಳಿಗಾಗಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಶ್ರೇಯಾ ಘೋಷಾಲ್ ಗೆ ಅತ್ಯುತ್ತಮ ಗಾಯಕಿ ಮತ್ತು ಕಾಲಭೈರವಗೆ ಅತ್ಯುತ್ತಮ ಗಾಯಕ ಪ್ರಶಸ್ತಿ ದೊರೆತಿದೆ. ‘ಗಡ್ವಾಲಿ’ ಮತ್ತು ಸೃಷ್ಟಿ ಲಖೇರಾ ನಿರ್ದೇಶನದ ಹಿಂದಿ ಚಿತ್ರ ‘ಏಕ್ ಥಾ ಗಾಂವ್’ ಅತ್ಯುತ್ತಮ ಸಾಕ್ಷö್ಯ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ

ರಾಜ್ಯ