ಪ್ರಜ್ಞಾನಂದನ ಯಶಸ್ಸಿನಲ್ಲಿ ಅಮ್ಮನ ಪಾತ್ರ ಅದ್ಭುತ….! 18 ರ. ಹರೆಯದ ಹಳ್ಳಿ ಹುಡುಗ ಚೆಸ್ ವಿಶ್ವಕಪ್‌ ಚಾಂಪಿಯನ್ ಆದುದು ಹೇಗೆ..?

ಪ್ರಜ್ಞಾನಂದನ ಯಶಸ್ಸಿನಲ್ಲಿ ಅಮ್ಮನ ಪಾತ್ರ ಅದ್ಭುತ….! 18 ರ. ಹರೆಯದ ಹಳ್ಳಿ ಹುಡುಗ ಚೆಸ್ ವಿಶ್ವಕಪ್‌ ಚಾಂಪಿಯನ್ ಆದುದು ಹೇಗೆ..?

: ಪ್ರಜ್ಞಾನಂದ ಹೆಸರು ದೇಶಾದ್ಯಂತ ಸದ್ದು ಮಾಡುತ್ತಿದೆ. ಚೆಸ್ ವಿಶ್ವಕಪ್‌ ಮೂಲಕ ಇಡೀ ದೇಶವನ್ನು ತನ್ನತ್ತ ತಿರುಗಿಸಿದ. ಫೈನಲ್‌ನಲ್ಲೂ ಗೆಲ್ಲುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು, ಆದರೆ ವಿಶ್ವದ ನಂಬರ್ ಒನ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ವಿಜೇತರಾದರು.

ವಿಶ್ವದ ನಂಬರ್ 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ಚಾಂಪಿಯನ್‌ ಆಗಿದ್ದು, ಇದರೊಂದಿಗೆ ಚೊಚ್ಚಲ ವಿಶ್ವ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದ್ದ 18ರ ಹರೆಯದ ಬಾಲಕ ಪ್ರಜ್ಞಾನಂದ ಅವರಿಗೆ ನಿರಾಸೆಯಾಗಿದೆ.

ಪ್ರಜ್ಞಾನಂದ 18ನೇ ವಯಸ್ಸಿನಲ್ಲಿ ಇಂತಹ ಪವಾಡವನ್ನು ಹೇಗೆ ಸಾಧಿಸಿದನು ಎಂದು ತಿಳಿಯಲು ನಟ್ಟಿಗರು ಉತ್ಸುಕರಾಗಿದ್ದಾರೆ. ಪ್ರಜ್ಞಾನಂದರ ಯಶಸ್ಸಿನ ಹಿಂದೆ ಅವರ ತಾಯಿಯ ಶ್ರಮವಿದೆ ಎಂದು ನಿಮಗೆ ತಿಳಿದಿದೆಯೇ? ಸದಾ ಬೆನ್ನೆಲುಬಾಗಿ ನಿಂತ ಪ್ರಗ್ಯಾನ್ ತಾಯಿ ನಾಗ ಲಕ್ಷ್ಮಿ ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಿರಿಯ ವಯಸ್ಸಿನಲ್ಲಿಯೇ ಪ್ರಜ್ಞಾನಂದ ಅವರು ಇಷ್ಟೊಂದು ಸಾಧನೆ ಮಾಡಲು ಮುಖ್ಯ ಕಾರಣ ಸಹೋದರಿ ವೈಶಾಲಿ. ಇಬ್ಬರು ಚೆಸ್ ಆಟವನ್ನು ಅನ್ನು ವಿಪರೀತ ಪ್ರೀತಿಸಲು ಕಾರಣವಾಗಿದ್ದು ಟಿವಿ ಕಾರ್ಟೂನ್ ಎಂಬುದು ವಿಶೇಷ. ಬಾಲ್ಯದಲ್ಲಿ ಪ್ರಜ್ಞಾನಂದ ಕೂಡ ಟಿವಿ ಕಾರ್ಟೂನ್​ ಅನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದರು. ಅತ್ತ ಸಹೋದರಿ ವೈಶಾಲಿ ಕೂಡ ಅದಾಗಲೇ ಕಾರ್ಟೂನ್​ಗೆ ಮಾರು ಹೋಗಿದ್ದರು. ಇದರಿಂದ ಚಿಂತೆಗೀಡಾಗಿದ್ದು ಪೋಲಿಯೋ ಪೀಡಿತ ಬ್ಯಾಂಕ್ ಉದ್ಯೋಗಿ ತಂದೆ ರಮೇಶಬಾಬು ಮತ್ತು ತಾಯಿ ನಾಗಲಕ್ಷ್ಮಿ. ಟಿವಿಯಿಂದ ದೂರ ಮಾಡಲು ತಂದೆ ಚೆಸ್​ ಬೋರ್ಡ್​ಗಳನ್ನು ತಂದುಕೊಟ್ಟಿದ್ದರು. ಇತ್ತ ಟಿವಿಯಿಂದ ವೈಶಾಲಿ ಚೆಸ್​ನತ್ತ ಮುಖ ಮಾಡುತ್ತಿದ್ದಂತೆ 3 ವರ್ಷದ ಪ್ರಜ್ಞಾನಂದ ಕೂಡ ಅಕ್ಕನೊಂದಿಗೆ ಆಟ ವೀಕ್ಷಿಸಲಾರಂಭಿಸಿದ.

ವೈಶಾಲಿಯ ಹೊಸ ಹವ್ಯಾಸವು ಪ್ರಜ್ಞಾನಂದ ಅವರ ಆಸಕ್ತಿಯ ಕೇಂದ್ರವಾಯಿತು. ಅದರಂತೆ ಇಬ್ಬರೂ ಕಾರ್ಟೂನ್​ನಿಂದ ದೂರವಾಗಿ ಚೆಸ್​ ಆಡಲು ಆರಂಭಿಸಿದರು. ಅಲ್ಲದೆ ಬಾಲ್ಯದಲ್ಲೇ ಚೆಸ್​ ಆಟವನ್ನು ಕರಗತ ಮಾಡಿಕೊಂಡರು. ನಂತರ ಮಕ್ಕಳಿಗೆ ಪ್ರೋತ್ಸಹಾ ಕೊಡುತ್ತಾ ಬಂದಿದ್ದಾರೆ. ನಾಡು-ನುಡಿ ಗೊತ್ತಿಲ್ಲದೇ ಇರುವ, ವಿಭಿನ್ನ ಸಂಸ್ಕೃತಿಗಳನ್ನು ಹೊಂದಿರುವ ದೂರದ ಊರುಗಳಿಗೆ ಮಗನನ್ನು ಕರೆದುಕೊಂಡು ಹೋಗಿ ಸಾಧಕರ ಸಾಲಿನಲ್ಲಿ ನಿಲ್ಲಿಸಿದ್ದಾರೆ ಎಂದರೆ ಆಕೆ ಮಹಾತಾಯಿಯೇ ಆಗಿರಬೇಕಲ್ಲವೇ…ಹೌದು, ಎಲ್ಲಾ ಸಾಧಕರ ಹಿಂದೆ ಮಹಿಳೆಯೊಬ್ಬರಿರುತ್ತಾರೆ ಎಂಬುದಂತು ನಿಜ. ಇಲ್ಲಿ ಪ್ರಜ್ಞಾನಂದನ ಸಾಧನೆಯ ಹಿಂದೆ ತಾಯಿ ಹಾಗೂ ಸಹೋದರಿ ಇದ್ದಾರೆ.

ರಾಜ್ಯ