
ಪೊಲೀಸ್ ಅಂದಕೂಡಲೇ ನಮಗೆ ಎದುರಿಗೆ ಬರುವುದು ಸಿನಿಮಾಗಳಲ್ಲಿ ಕಂಡುಬರುವ ಪೊಲೀಸರ ದೃಶ್ಯಗಳು ,ಅಲ್ಲಿ ದುಷ್ಟರಿಗೆ ಶಿಕ್ಷೆ ನೀಡುವುದು, ಜೈಲಿಗೆ ಹಾಕುವುದು, ಹೊಡೆಯೋದು, ಬಡೆಯೋದು ಇದೆಲ್ಲ ಸಿನೆಮಾಗಳಲ್ಲಿ ಪ್ರದರ್ಶಿಸಿ ನಮ್ಮ ಠಾಣೆ ಪೊಲೀಸ್ ಅಧಿಕಾರಿಗಳನ್ನು ನೋಡಿದಾಗ ಎಲ್ಲರಿಗೂ ಅನಿಸೋದು ಸಹಜ ಇದು ಒಂದು ರೀತಿ ಆದರೇ,
ಸಮಾಜದ ಎಲ್ಲರ ರಕ್ಷಣೆ ಹಾಗೂ ಶಾಂತಿ ಕಾಪಾಡುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ,
ಶಿಸ್ತಿನ ಕ್ರಮಕೈಗೊಳ್ಳುತ್ತಾರೆ ಆದ್ದರಿಂದ ಪೊಲೀಸ್ ಅಧಿಕಾರಿಗಳನ್ನು ನೋಡಿದಾಗ ಎಲ್ಲರಿಗೂ ಅನಿಸೋದೋ ನಮ್ಮನ್ನು ಏನೂ ಮಾಡುತ್ತಾರೋ ಎಂಬ ಭಯ!! ಆದರೇ ಪೊಲೀಸ್ ಅಧಿಕಾರಿಗಳು ಮನುಷ್ಯರೇ ಅವರಲ್ಲೂ ಹೃದಯವಂತಿಕೆ ಇದೆ, ಎಲ್ಲರ ಮೇಲೆ ಪ್ರೀತಿ ಇದೆ ಎಂಬುದಕ್ಕೆ ಸಾಕ್ಷಿ ಎಂಬಂತೆ.
ಇಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆ ಹಿಂಬದಿ ಸಾವನಪ್ಪಿದ ಗೋವನ್ನು ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಜೇಸಿಬಿ ಯಂತ್ರದ ಸಹಾಯದಿಂದ ಹೊಂಡವನ್ನು ತೋಡಿ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಸಿಬಂಧಿಗಳು ಹಾಗೂ ಸ್ಥಳೀಯರ ಸಹಕಾರದಲ್ಲಿ ಧಾರ್ಮಿಕ ವಿಧಿ ವಿಧಾನದ ಮೂಲಕ ಪಂಚಭೂತಗಳಲ್ಲಿ ಲೀನ ಮಾಡಿದರು.


ವರದಿ : ಶಿವ ಭಟ್ ಸುಬ್ರಹ್ಮಣ್ಯ.
