ಕಡಬದಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ ಸಾವು.

ಕಡಬದಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ ಸಾವು.

ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಒರ್ವ ಯುವತಿ ಹಾಗೂ ರಕ್ಷಣೆಗೆ ಬಂದ ಮತ್ತೊಬ್ಬರನ್ನು ಬಲಿ ಪಡೆದ ಕಾಡಾನೆ ಹಠಾತ್ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.ಈ ಆನೆಯನ್ನು ಕಡಬ ತಾಲೂಕಿನ ಕೊಂಬಾರು ಸಮೀಪ ಸೆರೆ ಹಿಡಿದ ಬಳಿಕ ಕೊಡಗಿನ ಮತ್ತಿಗೋಡು ಆನೆ ಶಿಬಿರಕ್ಕೆ ಕೊಂಡೊಯ್ಯಲಾಗಿತ್ತು ,ಈ ಆನೆ ಇದೀಗ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲದಲ್ಲಿ ಫೆಬ್ರವರಿ 20ರಂದು ಮುಂಜಾವಿನಲ್ಲಿ ಕಾಡಾನೆ ದಾಳಿಗೆ ರಂಜಿತಾ (24) ಹಾಗೂ ರಮೇಶ್ ರೈ (58) ಎಂಬವರು ಮೃತಪಟ್ಟಿದ್ದರು.ಬಳಿಕ ಸ್ಥಳಿಯರ ತೀವ್ರ ಒತ್ತಡದ ಬಳಿಕ ಕಾಡಾನೆಗಳನ್ನು ಸೆರೆ ಹಿಡಿಯುವ ಪ್ರಯತ್ನಕ್ಕೆ ಇಲಾಖೆ ಕೈ ಹಾಕಿತ್ತು, ಬಳಿಕ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು, ಮತ್ತು ಇದೇ ಆನೆಯನ್ನು ನರ ಹಂತಕ ಆನೆ ಎಂದು ಹೇಳಲಾಗಿತ್ತು,

ರಾಜ್ಯ