ಬೆಳ್ತಂಗಡಿಯಲ್ಲಿ ಸೌಜನ್ಯ ಎನ್ನುವ ಅಮಾಯಕ ಬಾಲಕಿ ಹತ್ಯೆ ಪ್ರಕರಣ:ಸುಳ್ಯದಲ್ಲಿ ಗೌಡರ ಯುವ ಸೇವಾ ಸಂಘದಿಂದ ನಗರದಲ್ಲಿ ವಾಹನ ಮೆರವಣಿಗೆ ನಡೆಸಿ ಪ್ರಕರಣ ಮರು ತನಿಖೆಗೆ ಆಗ್ರಹ –ತಹಶೀಲ್ಧಾರ್ ರಿಗೆ ಮನವಿ ಸಲ್ಲಿಕೆ.

ಬೆಳ್ತಂಗಡಿಯಲ್ಲಿ ಸೌಜನ್ಯ ಎನ್ನುವ ಅಮಾಯಕ ಬಾಲಕಿ ಹತ್ಯೆ ಪ್ರಕರಣ:
ಸುಳ್ಯದಲ್ಲಿ ಗೌಡರ ಯುವ ಸೇವಾ ಸಂಘದಿಂದ ನಗರದಲ್ಲಿ ವಾಹನ ಮೆರವಣಿಗೆ ನಡೆಸಿ ಪ್ರಕರಣ ಮರು ತನಿಖೆಗೆ ಆಗ್ರಹ –ತಹಶೀಲ್ಧಾರ್ ರಿಗೆ ಮನವಿ ಸಲ್ಲಿಕೆ.

ಬೆಳ್ತಂಗಡಿಯಲ್ಲಿ ಅಮಾಯಕ ಬಾಲಕಿ ಸೌಜನ್ಯ ಅತ್ಯಾಚಾರ ಹತ್ಯೆ ಪ್ರಕರಣವನ್ನು ಸರಕಾರ ಮರುತನಿಖೆಗೊಳಪಡಿಸಿ ನೈಜ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ಸುಳ್ಯ‌ ಗೌಡರ ಯುವ ಸೇವಾ ಸಂಘದ ವತಿಯಿಂದ ವಾಹನ ಜಾಥಾ ನಡೆಸಿ ಸುಳ್ಯ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸುಳ್ಯದ ಶ್ರೀ ವೆಂಕಟರಮಣ ಸೊಸೈಟಿ ಮುಂಭಾಗದಿಂದ ವಾಹನ ಜಾಥಾ ಆರಂಭಗೊಂಡಿತು.‌ ಜಾಥಾಕೆ ಚಾಲನೆ ನೀಡಿದ ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಮಾತನಾಡಿ ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣವನ್ನು ಸರಕಾರ ಮರುತನಿಖೆಗೊಳಪಡಿಸಿ 6 ತಿಂಗಳೊಳಗೆ ನೈಜ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು. ಇಂದು ನಾವು ಸರಕಾರಕ್ಕೆ ಮನವಿ ನೀಡುತ್ತೇವೆ. ನ್ಯಾಯಕ್ಕಾಗಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದು‌ ಹೇಳಿದರು.

ಬಳಿಕ ಅಲ್ಲಿ ಸೇರಿದ್ದ ಗೌಡ ಸಂಘದ ಪದಾಧಿಕಾರಿಗಳು, ಪ್ರಮುಖರು ಸೇರಿದಂತೆ ಹಲವರು ವಾಹನ ಜಾಥಾ ಮೂಲಕ ಸುಳ್ಯ‌ ನಗರದಲ್ಲಿ ಸಾಗಿ ತಾಲೂಕು ಕಚೇರಿಗೆ ಬಂದು ತಹಶೀಲ್ದಾರ್ ಮಂಜುನಾಥ್ ರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಡಾ.ಎನ್.ಎ.ಜ್ಞಾನೇಶ್ ಮನವಿಯನ್ನು ವಾಚಿಸಿದರು.
ಗೌಡರ ಯುವ ಸೇವಾ ಸಂಘದ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ, ಉಪಾಧ್ಯಕ್ಷ ಮುಗುಪು ಕೂಸಪ್ಪ ಗೌಡ , ಪಿ.ಸಿ.ಜಯರಾಮ, ಕೆ.ಆರ್.ಗಂಗಾಧರ, ದಿನೇಶ್ ಮಡಪ್ಪಾಡಿ,ಕಿಶೋರ್ ಉಳುವಾರು ಎ.ವಿ.ತೀರ್ಥರಾಮ, ಸದಾನಂದ‌ ಮಾವಜಿ, ಮೋಹನ್ ರಾಮ್‌ ಸುಳ್ಳಿ, ಪಿ.ಎಸ್.ಗಂಗಾಧರ ರಾಕೇಶ್ ಕುಂಠಿಕಾನ,ದೊಡ್ಡಣ್ಣ ಬರೆಮೇಲು, ಕೆ.ಆರ್.ಪದ್ಮನಾಭ, ದಾಮೋದರ ನಾರ್ಕೋಡು, ಕೆ.ಟಿ.ವಿಶ್ವನಾಥ, ಕಿರಣ್ ಬುಡ್ಲೆಗುತ್ತು,ಕಿರಣ್ ಕುರುಂಜಿ,ಸಂತೋಷ್, ಬೆಳ್ಯಪ್ಪ ಗೌಡ ಅಳಿಕೆ, ಶ್ರೀಕಾಂತ್ ಮಾವಿನಕಟ್ಟೆ, ಪುಷ್ಪಾವತಿ ಮಾಣಿಬೆಟ್ಟು, ಪುಷ್ಪಾ ಮೇದಪ್ಪ, ಗೀತಾ ಶೇಖರ್, ಲತಾ ಕುದ್ಪಾಜೆ, ವಿನುತಾ ಪಾತಿಕಲ್ಲು, ವಾರಿಜಾ ಕುರುಂಜಿ, ಎಸ್.ಆರ್.ಸೂರಯ್ಯ, ದಿನೇಶ್ ಮಡ್ತಿಲ, ಡಿ.ಎಸ್.ಗಿರೀಶ್, ಐ.ಬಿ.ಚಂದ್ರಶೇಖರ, ಅನಿಲ್ ಬಳ್ಳಡ್ಕ, ಸುರೇಶ್ ಎಂ.ಎಚ್ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ