ಮಂಗಳೂರಿನಲ್ಲಿ ಅನೈತಿಕ ಪೋಲೀಸ್ ಗಿರಿ – ವರದಿಗಾರನ ಮೇಲೆ ಹಲ್ಲೆಗೆ ಯತ್ನ – ದೂರು ದಾಖಲು ಇಬ್ಬರ ಬಂಧನ.

ಮಂಗಳೂರಿನಲ್ಲಿ ಅನೈತಿಕ ಪೋಲೀಸ್ ಗಿರಿ – ವರದಿಗಾರನ ಮೇಲೆ ಹಲ್ಲೆಗೆ ಯತ್ನ – ದೂರು ದಾಖಲು ಇಬ್ಬರ ಬಂಧನ.

ಮಂಗಳೂರು: ಮಂಗಳೂರಿನಲ್ಲಿ ಅನೈತಿಕ ಪೊಲೀಸ್‌ ಗಿರಿ ಮುಂದುವರಿದಿದ್ದು ಕಿಡಿಗೇಡಿಗಳು ಮಾಧ್ಯಮ ವರದಿಗಾರನ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಸ್ಥಳೀಯ ಖಾಸಗಿ ನ್ಯೂಸ್ ವೆಬ್ ಸೈಟ್ ವರದಿಗಾರನ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜು.26 ರಂದು ಸ್ನೇಹಿತೆಯೊಂದಿಗೆ ‌ಖಾಸಗಿ ವೆಬ್‌ ಸೈಟ್‌ ವರದಿಗಾರ ಅಭಿಜಿತ್‌ ಕಾವೂರು ಬಳಿಯ ರೆಸ್ಟಾರೆಂಟ್‌ ಒಂದಕ್ಕೆ ಊಟಕ್ಕೆ ತೆರಳಿದ್ದಾರೆ. ಊಟ ಮುಗಿಸಿ ವಾಪಾಸ್‌ ಬರುತ್ತಿದ್ದ ವೇಳೆ ಅಭಿಜಿತ್‌ ನನ್ನು ತಡೆದ ಇಬ್ಬರು ಯುವಕರು ನೀನು ಬ್ಯಾರಿಯಾ? ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಿಂದೂ ಹುಡುಗಿ ಜೊತೆ ನಿನಗೆ ಏನು ಕೆಲಸ ಎಂದು ಪ್ರಶ್ನಿಸಿದ್ದಾರೆ. ಅಭಿಜಿತ್‌ ನನ್ನು ಮುಸ್ಲಿಂ ಎಂದು ತಿಳಿದು ಹಲ್ಲೆಗೆ ಮುಂದಾಗಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಗೆ ಅಭಿಜಿತ್ ದೂರು ನೀಡಿದ್ದು, ದೂರಿನ ಹಿನ್ನೆಲೆ ಎಫ್ಐಆರ್ ದಾಖಲಿಸಿಕೊಂಡ ಕಾವೂರು ಪೊಲೀಸರು ಇಬ್ಬರು ಆರೋಪಿಗಳನ್ನು ಇಂದು ಬಂಧಿಸಿದ್ದಾರೆ. ಕೋಟೇಕಾರು ನಿವಾಸಿ ಚೇತನ್ (37) ಹಾಗೂ ಯೆಯ್ಯಾಡಿ ನಿವಾಸಿ ನವೀನ್(43) ಬಂಧಿತರು. ಜು.28ರ ರಾತ್ರಿ ಈ ಘಟನೆ ನಡೆದಿದ್ದು ಇಂದು ಆರೋಪಿಗಳ ಬಂಧನವಾಗಿದೆ

ರಾಜ್ಯ