ಸುಬ್ರಹ್ಮಣ್ಯ:2ಲಕ್ಷಕ್ಕೂ ಮಿಕ್ಕಿದ ಚಿನ್ನಾಭರಣ ಕಳವು :

ಸುಬ್ರಹ್ಮಣ್ಯ:2ಲಕ್ಷಕ್ಕೂ ಮಿಕ್ಕಿದ ಚಿನ್ನಾಭರಣ ಕಳವು :

ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆ ಬೀಗ ಮುರಿದು ಒಳನುಗ್ಗಿದ ಕಳ್ಳರು: ಸ್ಥಳಕ್ಕೆ ಬೆರಳಚ್ಚು ತಜ್ಞರ ಆಗಮನ.

ಸುಬ್ರಹ್ಮಣ್ಯದಲ್ಲಿ ಪುರೋಹಿತರೊಬ್ಬರ ಮನೆಯಿಂದ ಎರಡು ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನಾಭರಣ ಕಳುವಾದ ಘಟನೆ ಇಂದು ವರದಿಯಾಗಿದೆ ಸದಾನಂದ ಆಸ್ಪತ್ರೆ ಬಳಿ ಮನೆಯವರಾದ ಕೃಷ್ಣರಾಜ್ ಭಟ್ ಎಂಬವರು ಕಳೆದ 4 ದಿನಗಳ ಹಿಂದೆ ಮನೆಗೆ ಬೀಗ ಹಾಕಿ ಬೇರೆ ಸ್ಥಳಕ್ಕೆ ತೆರಳಿದ್ದರು ಇಂದು ಸಂಜೆ ಮನೆಗೆ ವಾಪಾಸ್ಸಾದಾಗ ಚಿನ್ನ, ಬೆಳ್ಳಿ, ನಗದು ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ ಕೂಡಲೇ . ಸುಬ್ರಹ್ಮಣ್ಯ ಪೊಲೀಸರಿಗೆ ತಿಳಿಸಲಾಗಿ ಸ್ಥಳಕ್ಕೆ ದಾವಿಸಿದ ಪೋಲಿಸರು ತನಿಖೆ ನಡೆಸುತಿರುವುದಾಗಿ ತಿಳಿದು ಬಂದಿದೆ, ಮನೆಯೊಳಗೆ ಕವಾಟುಗಳನ್ನು ಒಡೆಯಲಾಗಿದ್ದು ಬೆರಳಚ್ಚು ತಜ್ಞರನ್ನು ಕರೆಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ

ವರದಿ : ಶಿವ ಭಟ್ ಸುಬ್ರಹ್ಮಣ್ಯ.

ರಾಜ್ಯ