ಬಸ್ಸಿನಲ್ಲಿ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ಆರೋಪಿ ಬಂಧನ‌

ಬಸ್ಸಿನಲ್ಲಿ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ಆರೋಪಿ ಬಂಧನ‌

ಬೆಳ್ತಂಗಡಿ: ಮಂಗಳೂರಿನಿಂದ ಚಿಕ್ಕಮಗಳೂರಿಗೆ ಸಂಚರಿಸುತ್ತಿದ್ದ ಬಸ್‌ನಲ್ಲಿ ವಿದ್ಯಾರ್ಥಿನಿ ಜತೆ ಮಡಂತ್ಯಾರು ಸಮೀಪದ ಇಂದಬೆಟ್ಟು ನಿವಾಸಿ ಕಬೀರ್ ಎಂಬಾತ ಅಸಭ್ಯವಾಗಿ ನಡೆದು ಕೊಂಡ ಘಟನೆ ಶನಿವಾರ ನಡೆದಿದೆ.
ಚಿಕ್ಕಮಗಳೂರಿನ ಮೂಡಿಗೆರೆಯ ಯುವತಿ ತನ್ನೂರಿಗೆ ಮಂಗಳೂರಿ ನಿಂದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆರೋಪಿ ಕಬೀರ್ ತನ್ನ ಸೀಟಿನಲ್ಲಿ ಕುಳಿತಿದ್ದು, ಮಡಂತ್ಯಾರಿನಿಂದ ಸ್ವಲ್ಪ ಹಿಂದಕ್ಕೆ ತಲುಪಿದಾಗ ಅಸಭ್ಯವಾಗಿ ವರ್ತಿಸಿದ್ದಾನೆ.
ತಕ್ಷಣ ಪ್ರತಿರೋಧಿಸಿ ಉಜಿರೆಯ ಕಾಲೇಜೊಂದರಲ್ಲಿ ಓದುತ್ತಿದ್ದ ಸ್ನೇಹಿತರಿಗೆ ಮಾಹಿತಿ ನೀಡಿದ್ದಳು. ಈ ಬಗ್ಗೆ ಯುವತಿಯು ಪೋಷಕರಿಗೆ ಮಾಹಿತಿ ನೀಡಿ ಉಜಿರೆಯ ಬಳಿ ಬಸ್‌ ಬಂದಾಗ ಆರೋಪಿಯನ್ನು ಬಸ್ ಚಾಲಕ, ನಿರ್ವಾಹಕರ ಸಹಾಯ ಪಡೆದು ಬಸ್‌ನಿಂದ ಕೆಳಗಿಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಬೀರ್‌ನನ್ನು ವಶಕ್ಕೆ ಪಡೆದ ಬೆಳ್ತಂಗಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ

ರಾಜ್ಯ