
ಸುಳ್ಯ: ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪೋಷಕರಾದ ರವಿಪ್ರಕಾಶ್ ಅಟ್ಲೂರು ಮತ್ತು ಪದ್ಮಲತಾ ಅಟ್ಲೂರು ಕೊಡುಗೆಯಾಗಿ ನಿರ್ಮಿಸಿ ಕೊಟ್ಟ ನೂತನ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ಮತ್ತು ಬೆಂಗಳೂರು ಪ್ರಣವ ಫೌಂಡೇಶನ್ ನೀಡುವ ಲ್ಯಾಪ್ ಟಾಪ್ ಸ್ವೀಕಾರ ಹಾಗೂ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಗಲಿರುವ ಶಿವರಾಮ ಕೇನಾಜೆಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜು.೩೧ ರಂದು ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ನಡೆಯಲಿದೆ ಎಂದು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ ಕಿರಣ್ ಅಟ್ಲೂರು, ಹಾಗೂ ಗೌರವಾಧ್ಯಕ್ಷ ಅಚ್ಯುತ ಅಟ್ಲೂರು ತಿಳಿಸಿದ್ದಾರೆ ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಸ್ಟಿ ನಡೆಸಿ ವಿವರವನ್ನು ನೀಡಿದರು.


ಜುಲೈ 31 ರ ಬೆಳಿಗ್ಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೂತನ ಕೊಠಡಿಗಳ ಉದ್ಘಾಟಿಸಲಿದ್ದು, ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ,ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಕೆ ಹರೀಶ್ ಕುಮಾರ್ ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ ಶಿಕ್ಷಕಿ ಕಲಾವತಿ ವೆಂಕಟಕೃಷ್ಣಯ್ಯ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ಧೇಶಕ ಡಿ ಆರ್ ನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಇ ರಮೇಶ್ , ಪೋಲಿಸ್ ಉಪನಿರೀಕ್ಷಕ ಡಿ ಎನ್ ಈರಯ್ಯ,, ದ.ಗ್ರಾ ಯೋಜನಾಧಿಕಾರಿ ನಾಗೇಶ್ ಪಿ.,ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ,ಶಾಲಾ ಎಸ್ ಡಿ ಎಂಸಿ ಸಮಿತಿ ಅದ್ಯಕ್ಷ ದೇವಿ ಪ್ರಸಾದ್ ಅತ್ಯಾಡಿ ಭಾಗವಹಿಸಲಿದ್ದು, ವಿಶೇಷ ಉಪಸ್ಥಿತರಾಗಿ ಶಾಲಾ ಮಹಾ ಪೋಷಕ ರವಿಪ್ರಕಾಶ್ ಅಟ್ಲೂರು ,ಪ್ರಣವ ಫೌಂಡೇಶನ್ ಜಿಲ್ಲಾ ವಿಭಾಗ ಮುಖ್ಯಸ್ಥ ರಾಜೇಶ್ ರೈ, ಅಜ್ಜಾವರ ಗ್ರಾಮ ಪಂ ಸದಸ್ಯರಾದ ವಿಶ್ವನಾಥ ಮುಳ್ಯ ಮಠ, ಶಿವಕುಮಾರ, ರಾಘವ, ಮಹಾಗಣಪತಿ ಭಜನಾ ಮಂದಿರ ಅಧ್ಯಕ್ಷ ಧರ್ಮಪಾಲ ಬಟ್ಟಮಕ್ಕಿ, ದುರ್ಗಾ ಶಾಮಿಯಾನ ಮಾಲಕ ರವಿಪ್ರಕಾಶ್ ಬೊಮ್ಮೆಟ್ಟಿ ಭಾಗವಹಿಸಲಿದ್ದಾರೆ ಎಂದು ಹೇಳಿದ ಅವರು ಮುಳ್ಯ ಅಟ್ಲೂರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಶ್ರೀ ಮಹಾಗಣಪತಿ ಭಜನಾಮಂಡಳಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಅದ್ಯಾಪಕ ವೃಂದ ಪೋಷಕರು ಮತ್ತು ವಿದ್ಯಾರ್ಥಿಗಳು ಹಾಗೂ ಊರವರ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಸ್ಟಿಯಲ್ಲಿ ಎಸ್ ಡಿ ಎಂ ಸಿ ಅದ್ಯಕ್ಷ ದೇವಿಪ್ರಸಾದ್ ಅತ್ಯಾಡಿ, ವಿಶ್ವನಾಥ್ ಕುರುಂಜಿ, ನಾಗರಾಜ್ ಮುಳ್ಯ ಮೊದಲಾದವರಿದ್ದರು
