ಅವ್ಯಸ್ಥೆಯಿಂದ ಕೂಡಿರುವ ಸುಬ್ರಹ್ಮಣ್ಯಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ: ಸಾರ್ವಜನಿಕರಿಂದ ದುರಸ್ಥಿಗೆ ಒತ್ತಾಯ.

ಅವ್ಯಸ್ಥೆಯಿಂದ ಕೂಡಿರುವ ಸುಬ್ರಹ್ಮಣ್ಯಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ: ಸಾರ್ವಜನಿಕರಿಂದ ದುರಸ್ಥಿಗೆ ಒತ್ತಾಯ.

ಸುಬ್ರಹ್ಮಣ್ಯ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡಿಗೆ ಹೋಗುವ ತೀರ ಹದಗೆಟ್ಟಿರುವ ಮಾರ್ಗಕ್ಕೆ ಮುಕ್ತಿ ಎಂದು? ದಕ್ಷಿಣ ಭಾರತದ ಪವಿತ್ರ ಯಾತ್ರಾಸ್ಥಳ ನಾಗನಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದ ಬಸ್ ಸ್ಟ್ಯಾಂಡಿನ ಅವಸ್ಥೆಯನ್ನು ನೋಡಿದಾಗ ಯಾರಾದರೂ ಹುಬ್ಬೇರಿಸಲೇ ಬೇಕಾಗುತ್ತದೆ .

ಕಾರಣ ಇಲ್ಲಿನ ಬಸ್ ಸ್ಟ್ಯಾಂಡಿಗೆ ಹೋಗುವ ದಿನನಿತ್ಯ ನೂರಾರು ಬಸ್ಸುಗಳು ನೃತ್ಯವನ್ನು ಮಾಡುತ್ತಾ ಬಸ್ ಸ್ಟ್ಯಾಂಡನ್ನು ತಲುಪುವಂತದ್ದು ಸರ್ವೇ ಸಾಮಾನ್ಯ. ಅದಲ್ಲದೆ ಅದೆಷ್ಟೋ ಜನ ಭಕ್ತಾದಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ,ಇದೆ ಮಾರ್ಗದಲ್ಲಿ ಸಂಚರಿಸುವಂತ ಪರಿಸ್ಥಿತಿ ಕೂಡ ಇದೆ. ಈ ಹಿಂದೆ ಹಲವಾರು ಬಾರಿ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡ ಅವರು ಹೇಳುವ ಒಂದೇ ಉತ್ತರ ಏನೆಂದರೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ನ ಲ್ಲಿ ಈ ಬಸ್ ಸ್ಟ್ಯಾಂಡಿನ ಮಾರ್ಗದ ಉನ್ನತಿಕರಿಸುವಿಕೆ ಹಾಗೂ ಸರಿಪಡಿಸುವಿಕೆ ವ್ಯವಸ್ಥೆ ಇರುವುದರಿಂದ ಅವರೇ ಮಾಡುತ್ತಾರೆ ಎಂದು. ಆದರೆ ಇಲ್ಲಿಯ ತನಕ ಆಚೆ ದೇವಸ್ಥಾನದವರೂ ಮಾಡಿಲ್ಲ ,ಈಚೆ ಕೆಎಸ್ಆರ್ಟಿಸಿ ಇಲಾಖೆಯಿಂದಲೂ ಇಲ್ಲಿಯ ತನಕ ಸರಿಪಡಿಸಿರುವುದಿಲ್ಲ. ಇಲ್ಲಿ ದಿನನಿತ್ಯ ಓಡಾಡುವ ಬಸ್ಸುಗಳು, ಭಕ್ತಾದಿಗ ಳು ,ಪ್ರಯಾಣಿಕರೂ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಗೋಳು ತಪ್ಪಿದ್ದಲ್ಲ .ಆದ್ದರಿಂದ ಕೂಡಲೇ ಸಂಬಂಧಪಟ್ಟವರು ಇತ್ತ ಕಡೆ ಗಮನಹರಿಸಿ ಇದನ್ನ ಸರಿಪಡಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜ್ಯ