
ಗಡಿಕಲ್ಲು ಅಂಗನವಾಡಿ ಕೇಂದ್ರ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕರು ಸಂಪಾಜೆ ಗ್ರಾಮ ಪಂಚಾಯತ್ ಮಾಡಿದ ಅಭಿವೃದ್ಧಿ ಮೆಚ್ಚುವಂಥದ್ದು, ಇನ್ನೂ ಕೂಡ ಅನೇಕ ಅಭಿವೃದ್ಧಿಯಾಗಿ ಸಂಪಾಜೆ ಗ್ರಾಮ ರಾಜ್ಯ – ದೇಶದಲ್ಲಿ ಹೆಸರುಗಳಿಸಲಿ ಎಂದು ಶುಭಹಾರೈಸಿದರು .ನಂತರ ಕಲ್ಲುಗುಂಡಿ ಪೇಟೆಯಲ್ಲಿ ಮೀನು ಮಾರುಕಟ್ಟೆಯ ಕಟ್ಟಡ ಉದ್ಘಾಟನೆ, ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ, ಅಂಗವಿಕಲರಿಗೆ ಸಿಂಟೆಕ್ಸ್ ಟ್ಯಾಂಕ್ ವಿತರಣೆ, ಅಂಗವಿಕಲರ ಮನೆಗೆ ಸೋಲಾರ್ ಅಳವಡಿಕೆ, ಪಂಚಾಯತ್ ಕಚೇರಿಯಲ್ಲಿ ಕುಡಿಯುವ ನೀರಿನ ಕೂಲರ್ ಅಳವಡಿಕೆ ಉದ್ಘಾಟನೆ, ಪೆಲ್ತಡ್ಕ – ಕೊಪ್ಪತ್ತಡ್ಕ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಡೆಯಿತು.





