
ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಪಾಲಡ್ಕದಲ್ಲಿ ರಸ್ತೆಬದಿ ನಿಂತಿದ್ದ ಕ್ರೆಟಾ ಕಾರ್ ಗೆ ಎದುರು ಭಾಗದಿಂದ ಬಂದ ಶಿಪ್ಟ್ ಕಾರು ಡಿಕ್ಕಿಹೊಡೆದು ಎರಡೂ ಕಾರುಗಳಿಗೆ ಹಾನಿಯಾಗಿ ಸವಾರರು ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ, ಶಿಪ್ಟ್ ಕಾರು ಮತ್ತೊಂದು ವಾಹನವನ್ನು ಹಿಂದಿಕ್ಕುವ ಬರದಲ್ಲಿ ನಿಯಂತ್ರಣ ಕಳೆದು ನಿಂತಿದ್ದ ಕಾರಿಗೆ ಡಿಕ್ಕಿಯಾಗಿದೆ.ಘಟನೆಯಲ್ಲಿ ಯಾವುದೇ ಗಾಯಗಳಿಲ್ಲದೆ ಸವಾರರು ಪಾರಾಗಿದ್ದಾರೆ ಎಂದು ಸ್ಥಳಿಯರು ಮಾಹಿತಿ ತಿಳಿಸಿದ್ದಾರೆ.



