ಪರಿಸರ ಪ್ರೇಮಿ, ಉದ್ಯಮಿ ಡಾ. ಆರ್ ಕೆ ನಾಯರ್ ಕೊಲ್ಚಾರ್ ಶಾಲೆಗೆ ಬೇಟಿ ಶಾಲೆಗೆ ರೂ 1ಲಕ್ಷ ಸಹಾಯ ಹಸ್ತ.

ಪರಿಸರ ಪ್ರೇಮಿ, ಉದ್ಯಮಿ ಡಾ. ಆರ್ ಕೆ ನಾಯರ್ ಕೊಲ್ಚಾರ್ ಶಾಲೆಗೆ ಬೇಟಿ ಶಾಲೆಗೆ ರೂ 1ಲಕ್ಷ ಸಹಾಯ ಹಸ್ತ.


ಮೂಲತ ಸುಳ್ಯದ ನಿವಾಸಿ ಪ್ರಸ್ತುತ ಗುಜರಾತ್ ನಲ್ಲಿ ಉದ್ಯಮಿ ಯಾಗಿದ್ದು ದೇಶದ್ಯಾoತ ಮತ್ತು ವಿದೇಶಗಳಲ್ಲಿ ಕೋಟ್ಯಂತರ ಗಿಡಗಳನ್ನು ನೆಟ್ಟು ಮರುಭೂಮಿಯಲ್ಲು ಅರಣ್ಯ ಬೆಳೆಸಿದ ಪರಿಸರ ಪ್ರೇಮಿ ಡಾ. ಆರ್ ಕೆ ನಾಯರ್ ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರ್ ಇಲ್ಲಿಗೆ ಬೇಟಿ ನೀಡಿದರು.

ಮಕ್ಕಳೊಂದಿ ಗೆ ಬೆರೆತು ಪರಿಸರದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಶಾಲೆಯ ಪರಿಸರ ಸ್ವಚ್ಛತೆ,ತರಗತಿ ಕೊಠಡಿಗಳ ನಿಕ್ಕರತೆ,ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಸಭಾಭವನ, ಶಿಕ್ಷಕರ ಮತ್ತುಎಸ್ ಡಿ ಎಂ ಸಿ ಯವರ ಇಚ್ಚಾ ಶಕ್ತಿ ಇವುಗಳ ನ್ನು ಗಮನಿಸಿ ಸಬಾಭವನ ಕೆಲಸಕ್ಕೆ ರೂ 1ಲಕ್ಷ ಸಹಾಯಧನ ನೀಡುವುದಾಗಿ ಘೋಷಿಸಿದರು. ಬಿಸಿಯೂಟ ಸವಿದು ಶಾಲೆಗೆಗೆ ಬೇಟಿ ನೀಡಿದ ಸವಿನೆನಪಿಗಾಗಿ ಒಂದು ತೆಂಗಿನಗಿಡವನ್ನು ನೆಟ್ಟರು ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು ಸುದರ್ಶನ ಪಾತಿಕಲ್ಲು, ಗ್ರಾಮ ಪಂಚಾಯತ್ ಉಪಾಧ್ಯಕ್ಷರು ದಿನೇಶ್ ಕಣಕ್ಕೂರು, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಸೀತಾರಾಮ ಕೊಲ್ಲರ ಮೂಲೆ, ಎಸ್ ಡಿ ಎಂ ಸಿ ಉಪಾಧ್ಯಕ್ಷರು ಶ್ರೀಮತಿ ಹೇಮಾವತಿ ಕೊಯಿoಗಾಜೆ, ಸದಸ್ಯರಾದ ಕರುಣಾಕರ ಹಾಸ್ಪರೆ, ಜಗದೀಶ ಕೂ ಳಿಯಡ್ಕ, ಶ್ರಿಮತಿ ಲಲಿತ ಕದಿಕಡ್ಕ, ಶ್ರಿಮತಿ ಹೇಮಾವತಿ ಕದಿಕಡ್ಕ, ವಸಂತಿ ಕುಡೆoಬಿ, ಪೋಷಕರಾದ ಶಿವಪ್ರಸಾದ್ ಕೊಲ್ಚಾರ್, ಶ್ರಿಮತಿ ಪ್ರೇಮ ಹೊಸಗದ್ದೆ, ಶಿಕ್ಷಕರಾದ ಶ್ರೀಮತಿ ಮಮತಾ, ಶ್ರೀಮತಿ ವನಿತಾ, ಶ್ರಿಮತಿ ಸಹನಾ ಉಪಸ್ಥಿತರಿದ್ದರು ಶಾಲಾ ಶಿಕ್ಷಕಿ ಶ್ರಿಮತಿ ಜಲಜಾಕ್ಷಿ ಪ್ರಸ್ತಾವನೆ ಮತ್ತು ಸ್ವಾಗತಿಸಿ ಶಿಕ್ಷಕ ಶ್ರೀ ರಂಗನಾಥ ಎಂ ಎಚ್ ವಂದಿಸಿದರು.

ರಾಜ್ಯ