
ಸುಬ್ರಹ್ಮಣ್ಯ: ಇಂದು ಬೆಳಗಿನ ಹೊತ್ತು ಇoಜಾಡಿ ಸಮೀಪದ ಎರಡನೇ ತಿರುವಿನಲ್ಲಿ ಜರ್ಸಿ ದನ ಒಂದು ಮೋರಿಯ ಕೆಳಗೆ ಬಿದ್ದು ಒದ್ದಾಡುತ್ತಿತ್ತು. ದನದ ತಲೆಯು ಮೋರಿಯ ಕೆಳಗೆ ಸಿಕ್ಕಿ, ಮೇಲಕ್ಕೆಳಲಾರದ ಪರಿಸ್ಥಿತಿಯಲ್ಲಿ ಇತ್ತು. ಇದನ್ನು ಕಂಡ ಸ್ಥಳೀಯ ಆಪತ್ಬಾಂಧವ ಸುಬ್ರಹ್ಮಣ್ಯದ ಸಮಾಜ ಸೇವಕ ಡಾl ರವಿ ಕಕ್ಕೆ ಪದವು ಮತ್ತಿತರರು ಸೇರಿ ಮೇಕ್ಕೆತ್ತಿದರು.


ರವಿಕಕ್ಯಪದವು ಅವರು ತನ್ನ 15ಕ್ಕೂ ಮಿಕ್ಕಿ ಕಾರ್ಯಕರ್ತರೊಂದಿಗೆ ಬಂದು ದನವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು. ಇವರೊಂದಿಗೆ ಸ್ಥಳೀಯರು, ಕುಕ್ಕೆ ಮೆಟ್ಸ್ ನ ಸದಸ್ಯರು ಕೂಡ ಭಾಗಿಯಾಗಿದ್ದರು.
ಇದೇ ರೀತಿ ಜು.10 ರಂದು ಸುಬ್ರಹ್ಮಣ್ಯದ ಮೊಂಟಿ ಕಂಫರ್ಟ್ ಮತ್ತು ಪಶು ಆಸ್ಪತ್ರೆ ಕಪೌಂಡ್ ಮಧ್ಯೆ ಎತ್ತುವೊಂದು ಸಿಕ್ಕಿಹಾಕಿಕೊಂಡಿತ್ತು. ಅದನ್ನು ರವಿ ಕಕ್ಕೆಪದವು ತಂಡ ಮೇಲಕೆತ್ತಿತ್ತು
