ವಿಟ್ಲ: ರಸ್ಥೆ ಬದಿಯ ಮನೆಮೇಲೆ  ಉರುಳಿ ಬಿದ್ದ ಪಿಕಪ್: ಗಂಭೀರಾವಸ್ಥೆಯಲ್ಲಿ ಮನೆಯಳೊಗೆ ಸಿಲುಕಿ ಹಾಕಿಕೊಂಡ ಮನೆಯೊಡತಿ: ನಡೆಯುತ್ತಿರುವ ಕಾರ್ಯಾಚರಣೆ.

ವಿಟ್ಲ: ರಸ್ಥೆ ಬದಿಯ ಮನೆಮೇಲೆ ಉರುಳಿ ಬಿದ್ದ ಪಿಕಪ್: ಗಂಭೀರಾವಸ್ಥೆಯಲ್ಲಿ ಮನೆಯಳೊಗೆ ಸಿಲುಕಿ ಹಾಕಿಕೊಂಡ ಮನೆಯೊಡತಿ: ನಡೆಯುತ್ತಿರುವ ಕಾರ್ಯಾಚರಣೆ.

ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು
ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ
ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ
ಹಾಕಿಕೊಂಡಿರುವ ಘಟನೆ ಇಂದು ಮುಂಜಾನೆ ವರದಿಯಾಗಿದೆ .ಕೂರೇಲು ಮಧ್ಯದ ಅಂಗಡಿಯ
ಸಮೀಪದಲ್ಲಿ ರಸ್ತೆ ಬದಿಯಲ್ಲಿದ್ದ ಮನೆಗೆ ಜು.14
ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ
ಪಿಕಪ್ ಬಿದ್ದಿದೆ ಮನೆಯ ಮೇಲೆ ಮೇಲ್ಚಾವಣಿ ಹುಡಿ ಹುಡಿಯಾಗಿದ್ದು ಅಪಘಾತದಿಂದ
ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್
ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ
ನೂರಾರು ಕೋಳಿಗಳು ಸತ್ತಿದೆ. ಅಪಘಾತ
ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು,
ಮಹಿಳೆಗೆ ಗಂಭೀರ ಗಾಯವಾದ
ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು
ಮಾಡದೆ ಮಹಿಳೆಯನ್ನು ಹೊರಗೆ ತೆಗೆಯಲು
ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ
ವಾಹನ ಬೀಡು ಬಿಟ್ಟಿದ್ದು ಕ್ರೇನ್ ಬಳಸಿ ವಾಹನ
ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ

ರಾಜ್ಯ