ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ: ವಾಹನ ಅಡ್ಡಗಟ್ಟಿ ಆರೋಪಿಯನ್ನು ಸೆರೆ ಹಿಡಿದ ಪೋಲಿಸರು.

ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ: ವಾಹನ ಅಡ್ಡಗಟ್ಟಿ ಆರೋಪಿಯನ್ನು ಸೆರೆ ಹಿಡಿದ ಪೋಲಿಸರು.

ಪರವಾನಗಿ ಇಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು
ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕೇರಳ
ನೋಂದಾವಣಿಯ ವಾಹನವನ್ನು ಅಡಗಟ್ಟಿ ವಶಕ್ಕೆ
ಪಡೆದುಕೊಂಡ ಘಟನೆ ಸುಳ್ಯದಲ್ಲಿ
ವರದಿಯಾಗಿದೆ.


ಮೂರು ಜಾನುವಾರುಗಳನ್ನು ಟೆಂಪೋದಲ್ಲಿ ಅಕ್ರಮವಾಗಿ ತುಂಬಿಕೊಂಡು ಹೋಗುತ್ತಿರುವ ವಿಚಾರ ತಿಳಿದ ಪೊಲೀಸರು ಸುಳ್ಯದ ಜಾಲ್ಸೂರು ಬಳಿ ವಾಹನವನ್ನು ಅಡ್ಡಗಟ್ಟಿದ್ದು ಎರಡು ಜಾನುವಾರು ಹಾಗೂ ರತೀಶ್ ಎಂಬಾತನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಒಬ್ಬನ ಹೆಸರು ರತೀಶ್ ಎಂದು ತಿಳಿದುಬಂದಿದ್ದು ಇದೀಗ ಆರೋಪಿತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಬೆಳ್ಳಾರೆಯಿಂದ ಜಾನುವಾರು ಹೇರಿಕೊಂಡು ಕೇರಳಕ್ಕೆ
ಹೋಗುತ್ತಿತ್ತು ಎನ್ನಲಾಗುತ್ತಿರುವ ಕೇರಳ ರಿಜಿಸ್ಟ್ರೇಶನ್ KL 60 T 7120 ವಾಹನವನ್ನು ಪೋಲೀಸ್ ವಶಕ್ಕೆ ಪಡೆದಿದ್ದು ಇದೀಗ ಠಾಣೆಯಲ್ಲಿ ವಾಹನ ಇರಿಸಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯ