
ಸುಳ್ಯ: ಬೈಕ್ ಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿಯೊಂದು ಬೈಕ್ ಸವಾರ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದರೂ ಟಿಪ್ಪರ್ ನಿಲ್ಲಿಸದೆ ಪರಾರಿಯಾದ ಘಟನೆ ಜು14 ರಾತ್ರಿ ನಡೆದಿದೆ ಸುಳ್ಯದಿಂದ ಕಲ್ಲಪಳ್ಳಿ ತನ್ನ ಮನೆಗೆ ತೆರಳುತ್ತಿದ್ದ ಪ್ರದೀಪ್ ಎಂಬ ಯುವಕ ಅಪಘಾತದಲ್ಲಿ ಗಂಭೀರ ಸ್ವರೂಪದ ಗಾಯಗೊಳಗಾದ ಯುವಕ ಎಂದು ತಿಳಿದು ಬಂದಿದೆ.



ಆಲೆಟ್ಟಿ ಗ್ರಾಮದ ಮಿತ್ತಡ್ಕ ಎಂಬಲ್ಲಿ ಘಟನೆ ನಡೆದಿದ್ದು
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರನ ಕಾಲಿಗೆ
ಗಂಭೀರವಾಗಿ ಗಾಯವಾಗಿದ್ದು ಟಿಪ್ಪರ್ ಚಾಲಕ ತನ್ನ
ವಾಹನವನ್ನು ನಿಲ್ಲಿಸದೇ ಮುಂದಕ್ಕೆ ತೆರಳಿ
ಪರಾರಿಯಾಗಿರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ .ಆಲೆಟ್ಟಿಯ ಮಿತ್ತಡ್ಕ ಕೆ.ಎಫ್.ಡಿ.ಸಿ ವಿಶ್ರಾಂತಿ ಗೃಹದ ಬಳಿಯಲ್ಲಿ ಈ ಘಟನೆ ನಡೆದಿದ್ದು. ಗಾಯಾಳು ಪ್ರದೀಪ್ ರನ್ನು ಸುಳ್ಯ ಸರಕಾರಿ
ಆಸ್ಪತ್ರೆಗೆ ಸ್ಥಳೀಯರು ಕರೆತಂದು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.

ಅಪಘಾತ ಬಳಿಕ ಪರಾರಿಯಾಗಿರುವ ಟಿಪ್ಪರ್ ಮತ್ತು ಚಾಲಕನಿಗಾಗಿ ಪೋಲಿಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
