
ಮನುಷ್ಯ ದೇಹವೇ ಒಂದು ಕೌತುಕದ ಗೂಡು ,ಮಾನವನ ಶರೀರದ ಒಂದೊಂದು ಕಾರ್ಯಚಟುವಟಿಕೆಯೇ ಒಂದು ವಿಸ್ಮಯ ,ಯಾವುದೇ ಜಾತಿಯವರಿರಲಿ, ಯಾವುದೇ ಧರ್ಮದವರಿರಲಿ , ಬಡವನಿರಲಿ ಶ್ರೀಮಂತನೇ ಇರಲಿ ಎಲ್ಲರ ದೇಹದ ಚಯಾಪಚಯ ಕ್ರೀಯೆಗಳು ಒಂದೇ….


ಯಾವುದೇ ವ್ಯಕ್ತಿಯ ದೇಹದ ಯಾವುದೇ ಭಾಗ ತನ್ನ ಎಂದಿನ ಕೆಲಸ ಮಾಡಲು ಹಿಂದೇಟು ಹಾಕಿದಾಗ ವೈದ್ಯರನ್ನು ಕಾಣುವುದು ಸರ್ವೇ ಸಾಮಾನ್ಯ, ಹಾಗಿದ್ದು ..ಕೆಲವೊಮ್ಮೆ ಕೆಲವು ಕಾಯಿಲೆಗಳಿಗೆ ವೈದ್ಯರ ಬಳಿಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೇ ಇರುವವರು ಲಕ್ಷಾಂತರ ಜನ, ವೈದ್ಯರು ಕೇಳುವ ಹಣ ಹೊಂದಿಸಲು ಸಾಧ್ಯವಾಗದ ಸಾವಿರಾರು ಜನ..ಹೀಗೆ ಕಾಯಿಲೆಯ ಜೊತೆ ಜೊತೆಯಲೀ ಜೀವನ ಜೀಕುವ ಅನಿವಾರ್ಯತೆಯಲ್ಲಿ ಕೋಟ್ಯಾಂತರ ಜನ..ಇನ್ನು ತಮ್ಮ ತಮ್ಮ ಕಷ್ಟಗಳನ್ನು ಇತರರೊಡನೆ ಹಂಚಿಕೊಳ್ಳಲಾಗದೆ ಬವಣೆಗಳನ್ನು ಬಚ್ಚಿಟ್ಟು ಬದುಕು ಸವೆಸುತ್ತಿದ್ದಾರೆ..ಹಾಗೇ ನೋಡಿದರೆ ಪ್ರತೀ ಮನುಷ್ಯನು ಒಂದಲ್ಲಾ ಒಂದು ಕಾಯಿಲೆಗಳಿಂದ ಬಳಲುತ್ತಲೇ ಇರುತ್ತಾರೆ ಎನ್ನುವುದು ವಾಸ್ತವ ಸಂಗತಿ.

ಜನರು ತನಗೆ ಎದುರಾಗುವ ಕಾಯಿಲೆಗಳಿಗೆ ವೈದ್ಯರನ್ನು ತೀರ ಹಚ್ಚಿಕೊಂಡಿರುವಂತದ್ದು ಬಹಳ ವರ್ಷಗಳಿಂದ ನಡೆದು ಬಂದಿಲ್ಲ. ಬಂದಂತಹ ರೋಗಗಳು ಶೀಘ್ರ ಗುಣವಾಗಿ ಮತ್ತೇ ಎಂದಿನಂತೆ ಬೇಗ ಬೇಗ ಕೆಲಸಮಾಡುತ್ತಾ ಜೀವನ ನಡೆಸುವ ಅನಿವಾರ್ಯತೆ ಇರುವುದರಿಂದ ಕಷ್ಟವಾದರು ನಷ್ಟವಾದರೂ ಇಂಗ್ಲಿಷ್ ಔಷದಕ್ಕೆ ಗಂಟುಬೀಳುತ್ತಿರುವುದ ಇತ್ತೀಚೆನ ವೇಗದ ಜಗತ್ತಿಗೆ ಒಪ್ಪಿಗೇ ಆದರೂ ದೇಹಕ್ಕೆ ಮಾತ್ರ ಸುತಾರಾಂ ಒಪ್ಪಿಗೆ ಯಾಗುವುದಿಲ್ಲ ಎನ್ನುವುದು ಎಲ್ಲರು ಅರಿತವರೇ ಆಗಿದ್ದಾರೆ.

ಅಂದರೆ ಕೆಲವೇ ವರ್ಷಗಳ ಹಿಂದೆ ಬದುಕುತ್ತಿದ್ದ ಜನ ನಾಟಿ ಔಷದಗಳಿಂದ ತಮಗೆ ಬಂದ ಕಾಯಿಲೆಗಳಿಂದ ಮುಕ್ತವಾಗಿ ನಗುತ್ತಾ ಜೀವನ ಸವೆಸಿರುವುದು ಹಲವರ ನೆನಪಿನ ಬುತ್ತಿ ಇನ್ನು ಹಸುರಾಗಿರುವುದು ನಿತ್ಯ ಸತ್ಯ.. ಜನರಿಗೇ ಈಗಲೂ ನಾಟೀ ಔಷದ ಬೇಕು .ಆದರೆ ಮಾಹಿತಿಯ ಕೊರತೆಯಿಂದ,ವಿನಾಷವಾಗುತ್ತಿರುವ ಕೆಲವೊಂದು ಗಿಡಮೂಲಿಕೆಗಳ ಸಂತತಿಯಿಂದ ನಾಟಿ ಔಷದ ದುರ್ಲಭವಾಗುತ್ತಿದೆ,ಆದರೆ ಇದೀಗ ಸುಳ್ಯದವರ ಅದೃಷ್ಟವೆಂಬಂತೆ,ಸಂಕಷ್ಟದಲ್ಲಿದ್ದವರ ಅನುಕೂಲಕ್ಕಾಗಿ ಕಳೆದ 25 ವರ್ಷಗಳಿಂದ ನಾಟೀ ವೈದ್ಯ ಪದ್ದತಿಯ ಮೂಲಕ ಔಷದ ನೀಡುತ್ತಿರುವ ಚಂದ್ರಣ್ಣ ಸುಳ್ಯದ ಎ ಪಿ ಎಂ ಸಿ ಸಮೀಪ ಕೇಂದ್ರವನ್ನು ತೆರೆದು ಔಷದ ನೀಡುತ್ತಿದ್ದಾರೆ ದಿನ ಪ್ರತಿ ಹತ್ತಾರು ಜನ ಇವರನ್ನು ಅರಸಿ ಕೊಂಡು ಬರುತ್ತಿರುವುದು ಕಂಡು ಬರುತ್ತಿದೆ, ಕೇರಳದಲ್ಲಿ ಸಿಗುವ ಗಿಡ ಮರಗಳ ತೊಗಟೆ ,ಎಲೆಗಳನ್ನು ಸಂಗ್ರಹಿಸಿ ಔಷದವನ್ನಾಗಿಸಿ ,ಕ್ಯಾನ್ಸರ್, ಪಕ್ಷವಾತ, ವೆರಿಕೋಸ್, ಸಕ್ಕರೆ ಕಾಯಿಲೆ ಬೆನ್ನುಹುರಿಯ ಸಮಸ್ಯೆ, ಎಲುಬಿನ ಮತ್ತು ಸ್ನಾಯುಗಳ ತೊಂದರೆ, ಚರ್ಮವ್ಯಾದಿ , ಬಂಜೆತನ ಮತ್ತು ಹೆಣ್ಣು ಮಕ್ಕಳನ್ನು ಕಾಡುವ ಹಲವು ಸಮಸ್ಯೆಗಳಿಗೆ ಗಿಡಮೂಲಿಕೆಯಿಂದ ಮಾಡಿದ ಔಷದಿಯನ್ನು ನೀಡಿ ಗುಣಪಡಿಸವ ಭರವಸೆಯನ್ನು ಅವರು ನೀಡುತ್ತಾರೆ, ಯಾವುದೇ ಸಮಸ್ಯೆ ಇದ್ದವರು ಇವರನ್ನು 9483151388 ಸಂಖ್ಯೆ ಗೆ ಸಂಪರ್ಕಿಸ ಬಹುದಾಗಿದೆ.

