
ಸುಳ್ಯ ತಾಲೋಕಿನ ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ , ಆಲೆಟ್ಟಿ ಗ್ರಾಮದ ಮೂರು ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದೆ,ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಅರಂಬೂರು ಎಂಬಲ್ಲಿ ಇರುವ ಸಲ್ಮಾ ಚಿಕನ್ ಅಂಗಡಿಗೆ ಕಳೆದ ರಾತ್ರಿ ಕಳ್ಳರು ನುಗ್ಗಿರುವುದಾಗಿ ತಿಳಿದು ಬಂದಿದೆ.
ತಡರಾತ್ರಿ ಚಿಕನ್ ಸೆಂಟರಿನ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿಯ ಡ್ರಾವರ್ ನಲ್ಲಿದ್ದ 5 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.ಪೋಲಿಸ್ ದೂರು ದಾಖಲಾಗಿದ್ದು ಪೋಲಿಸರು ಸ್ಥಳಕ್ಕೆ ಬೇಟಿ ನೀಡಿದ್ದಾರೆ.

