
ಸುಳ್ಯ ತಾಲೋಕಿನ ಆಲೆಟ್ಟಿ ಗ್ರಾಮದ ಎರಡು ಅಂಗಡಿಗಳ ಬೀಗ ಮುರಿದ ಕಳ್ಳರು ನಗದಿನೊಂದಿಗೆ ಪರಾರಿಯಾದ ಘಟನೆ ಜುಲೈ 11 ರ ರಾತ್ರಿ ನಡೆದಿದ್ದು , ಪ್ರಕರಣ ಇಂದು ಬೆಳಕಿಗೆ ಬಂದಿದೆ.



ಆಲೆಟ್ಟಿ ಗ್ರಾಮದಲ್ಲಿ ನಾಗಪಟ್ಟಣ ಬಸ್ ತಂಗುದಾಣ ಪಂಚಾಯತ್ ಕಟ್ಟಡದಲ್ಲಿ ಅಂಗಡಿ ನಡೆಸುತ್ತಿದ್ದ ಪುಷ್ಪರಾಜ್ ಎಂಬವರ ಅಂಗಡಿ ಮತ್ತು ಮಿತ್ತಡ್ಕದ ರೋಟರಿ ಶಾಲಾ ಎದುರು ಬಸ್ ತಂಗುದಾಣದ ಪಂಚಾಯತ್ ಕಟ್ಟಡದಲ್ಲಿ ಅಂಗಡಿ ನಡೆಸುತ್ತಿದ್ದ ದಾಮೋಧರ ರವರ ಅಂಗಡಿಯಿಂದ ಕಳ್ಳತನ ನಡೆದಿದೆ . ರಾತ್ರಿ ವೇಳೆ ಬೀಗಮುರಿದ ಕಳ್ಳರು ದಾಮೋಧರ ರವರ ಅಂಗಡಿಯ ಡ್ರಾವರ್ ನಲ್ಲಿದ್ದ 10000 ನಗದು ದೋಚಿದ್ದಾರೆ, ನಾಗಪಟ್ಟಣ ಅಂಗಡಿಯಲ್ಲಿ ರೂ 500 ರಷ್ಟು ಚಿಲ್ಲರೆ ಹಣ ಎಗರಿಸಿದ್ದು ಪ್ರಿಡ್ಜ್ ನಲ್ಲಿದ್ದ ಜ್ಯೂಸ್ ಕುಡಿದು ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ,ಪೋಲಿಸರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.
