ಸುಳ್ಯ ಸ್ವರ್ಣ ಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಶುಭಾರಂಭ.

ಸುಳ್ಯ ಸ್ವರ್ಣ ಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಶುಭಾರಂಭ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ನೀಡಿದ ಕೊಡುಗೆ ಅಪಾರವಾದುದು, ಜನರು ಸ್ವಯುಕ್ತತೆಯ ಬದುಕು ನಡೆಸಲು ಇಂದು ಸಹಕಾರಿ ಸಂಸ್ಥೆಗಳು ಶಕ್ತಿಮೀರಿ ಪ್ರಯತ್ನಿಸುತ್ತಿದ್ದು,ಇಂತಹ ನೂರಾರು ಸಹಕಾರ ಬ್ಯಾಂಕಗಳಿಂದಾಗಿ ಕೋಟ್ಯಾಂತರ ಜನರು ಸ್ವಾವಲಂಭನೆ ಬದುಕು ಕಟ್ಟಿಕೊಂಡಿದ್ದಾರೆ, ಸಂಸ್ಥೆಯ ಠೇವಣಿ ದಾರರಿಗೆ ಕೊಡುವ ಗೌರವ, ಸಾಲಪಡೆಯುವವನಿಗೂ ನೀಡುವಂತಾಗಬೇಕು , ಸಾಲ ಬಾಕಿಗಳನ್ನೂ ಸಾಲಗಾರನಿಂದ ಗೌರವಯುತವಾಗಿ ಮರುಪಾವತಿಯಾಗುವಂತೆ ನೋಡಿಕೊಳ್ಳುವುದು ಸಂಸ್ಥೆ ಹಾಗೂ ಸಿಬ್ಬಂದಿಗಳ ಕರ್ತವ್ಯವಾಗಿದೆ ಎಂದು ಸಹಕಾರಿ ಧುರೀಣ ವೆಂಕಟ್ರಮಣ‌ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ ಸಿ ಜಯರಾಮ ಹೇಳಿದ್ದಾರೆ,

ಅವರು ಸುಳ್ಯದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಸ್ವರ್ಣ ಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು, ಜೂ.29 ರಂದು . ರಥಬೀದಿಯ ವಿನಾಯಕ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಕಾರ್ಯಾರಂಭ ಮಾಡಿರುವ ಸ್ವರ್ಣ ಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯನ್ನು ಸುಳ್ಯ ವೃತ್ತ ನಿರೀಕ್ಷಕರಾದ ನವೀನ್‌ಚಂದ್ರ ಜೋಗಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು .


ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜನಾರ್ಧನ. ಡಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಸತ್ಯನಾರಾಣ‌ ಅಚ್ರಪ್ಪಾಡಿ, ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಅಶ್ವತ್ ಬಿಳಿಮಲೆ, ನಿರ್ದೇಶಕರಾದ ರಾಘವ ಗೌಡ ಎಂ.ಕೆ, ಪ್ರಕಾಶ್ ಕೆ, ಭವಾನಿ ಬಿ.ಆರ್, ಹರ್ಷಿತಾ ಎನ್.ಪಿ, ಸಚಿನ್ ಕುಮಾರ್ ಬಿ.ಎನ್, ಸತೀಶ್ ಕೆ.ಜಿ, ಮಹೇಶ್ ಎಂ.ಆರ್, ದೀಕ್ಷಿತ್ ಕುಮಾರ್ ಪಿ, ವೃತ್ತಿಪರ ನಿರ್ದೇಶಕರಾದ ಆನಂದ ಖಂಡಿಗ, ಡಾ. ಪುರುಷೋತ್ತಮ ಕೆ.ಜಿ, ಧರ್ಮಪಾಲ ಕೊಯಿಂಗಾಜೆ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಜನಾರ್ಧನ ಡಿ ಸ್ವಾಗತಿಸಿ, ವೃತ್ತಿಪರ ನಿರ್ದೇಶಕರಾದ ಪುರುಷೋತ್ತಮ ಕೆ.ಜಿ ವಂದಿಸಿ, ಆನಂದ ಖಂಡಿಗ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ, ಸಿಬ್ಬಂದಿ ಲಿಖಿತಾ ಅತಿಥಿಗಳನ್ನು ಆಹ್ವಾನಿಸಿದರು.ಸಂಸ್ಥೆ ವತಿಯಿಂದ ವೃತ್ತ ನೀರಿಕ್ಷಕ ನವೀನ್ ಚಂದ್ರ ಜೋಗಿ ಹಾಗೂ ಸಹಕಾರಿ ಧುರೀಣ ಪಿ ಸಿ ಜಯರಾಮರವರನ್ನು ಗೌರವಿಸಲಾಯಿತು.

ರಾಜ್ಯ