
ಮಾರುಕಟ್ಟೆಯಲ್ಲಿ ವಿದೌಟ್ ಸ್ಕಿನ್ ಮಾಂಸಕ್ಕೆ 260ರಿಂದ 290 ರೂ. ವರೆಗೆ ಏರಿಕೆ ಕಂಡಿದೆ. ಕೆಲವು ದಿನಗಳ ಹಿಂದೆ 230ರಿಂದ 250 ರೂ. ವರೆಗೆ ಇತ್ತು. ವಿದ್ ಸ್ಕಿನ್ ಮಾಂಸಕ್ಕೆ 220ರಿಂದ 260 ರೂ.ಗೆ ದರ ಏರಿದೆ. ಸದ್ಯ ಕುರಿ ಮಾಂಸಕ್ಕೆ (ಮಟನ್) ಕೆ.ಜಿ.ಗೆ 700 ರೂ. ಇದೆ. ಬನ್ನೂರು ಸ್ಪೆಶಲ್ ಮಟನ್ ಕೆ. ಜಿ. 800 ರೂ. ದರದಲ್ಲಿ ಮಾರಾಟವಾಗುತ್ತಿದೆ. ಇನ್ನು ಮೊಟ್ಟೆ ಬೆಲೆ ಕೂಡ 5.5 ರೂಪಾಯಿಗಳಿಂದ ಸದ್ಯ 7-8 ರುಪಾಯಿಗೆ ಹೆಚ್ಚಳವಾಗಿದೆ.


ಕೋಳಿಗೆ ಆಹಾರವಾಗಿ ಬಳಕೆಯಾಗುವ ಧಾನ್ಯ, ಅಕ್ಕಿಹೊಟ್ಟು, ಮೆಕ್ಕೆಜೋಳ, ಸೋಯಾ ಬೆಲೆ ಏರಿಕೆ, ಇಂಧನ ಬೆಲೆ ಹೆಚ್ಚಳದಿಂದ ಸಾಗಣೆ ವೆಚ್ಚ ಅಧಿಕವಾಗಿದೆ. ಬಿಸಿಲಿನಿಂದಾಗಿ ಕೋಳಿಗಳು ಆಹಾರ ತಿನ್ನುವುದು ಕಡಿಮೆ. ನೀರು ಹೆಚ್ಚು ಸೇವಿಸುವುದರಿಂದ ಕೋಳಿಯಲ್ಲಿ ಕೊಬ್ಬು ಪ್ರಮಾಣ ಹೆಚ್ಚಳವಾಗುವುದಿಲ್ಲ. ಬಿಸಿಲಿನ ತಾಪಮಾನಕ್ಕೆ ಕೋಳಿಗಳು ಸಾವನ್ನಪ್ಪುವ ಸಮಸ್ಯೆಯೂ ಇದೆ. ಇದರಿಂದ ಮಾಂಸ ಉತ್ಪಾದನೆ ಸಹಜವಾಗಿ ಕುಂಠಿತವಾಗುತ್ತದೆ ಎಂದು ಕೋಳಿ ಸಾಕಾಣಿಕೆದಾರರು ತಿಳಿಸಿದ್ದಾರೆ.
ತರಕಾರಿ, ಹಣ್ಣು ಬೆಲೆಯೂ ದುಬಾರಿ
ಇನ್ನು ತರಕಾರಿ ಹಣ್ಣುಗಳ ಬೆಲೆಯಲ್ಲೂ ದಿಢೀರ್ ಹೆಚ್ಚಳವಾಗಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಒಂದು ಕೆಜಿ ಹುರುಳಿಕಾಯಿ ಬೆಲೆ 100 ರೂಪಾಯಿ ಗಡಿ ದಾಟಿದ್ದು, ಮೈಸೂರು ಬದನೆ 60-80 ರೂಪಾಯಿ ಆಗಿದೆ. ಕ್ಯಾರೆಟ್ 60 ರೂಪಾಯಿ, ನುಗ್ಗೆಕಾಯಿ 120 ರೂಪಾಯಿ, ಟೊಮ್ಯಾಟೊ 30-40 ರೂಪಾಯಿ, ಹಸಿರು ಮೆಣಸಿನಕಾಯಿ 40-50 ರುಪಾಯಿ, ಕ್ಯಾಪ್ಸಿಕಂ 50-60 ರೂಪಾಯಿ, ಗೋರಿಕಾಯಿ 45-55 ರೂಪಾಯಿ, ಬೆಂಡೆಕಾಯಿ 45-50 ರುಪಾಯಿಗೆ ಮಾರಾಟವಾಗುತ್ತಿದೆ. ತರಕಾರಿ ಮಾತ್ರವಲ್ಲದೆ ಸೊಪ್ಪುಗಳ ದರ ಕೂಡ ಕಳೆದ ವಾರಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಕೊತ್ತಮರಿ, ದಂಟು, ಅರಿವೆ, ಪಾಲಕ್, ಮೆಂತ್ಯ ಸೊಪ್ಪಿನ ದರ ಭಾರಿ ಏರಿಕೆಯಾಗಿದೆ. ಹಣ್ಣಿನ ಬೆಲೆಗಳಲ್ಲಿ ಕೂಡ ಏರಿಕೆ ಕಂಡಿದ್ದು ಗ್ರಾಹಕರಿಗೆ ಹೊರೆಯಾಗಿದೆ. ಸಪೋಟಾ 90 ರೂಪಯಿ, ದಾಳಿಂಬೆ 130, ಅನಾನಸ್ 90 ರು., ಪಪ್ಪಾಯ 60 ರುಪಾಯಿ, ಮೋಸಂಬಿ 60, ದ್ರಾಕ್ಷಿ 80 ರೂಪಾಯಿ, ಸೇಬು 220 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ