ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಸುಳ್ಯದಲ್ಲಿ ಚಾಲನೆ:ಸುಳ್ಯ ಶಾಸಕಿ ಗೈರು ಹಾಜರಿ ಹಿನ್ನಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಶೀಲ್ಧಾರ್.

ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಸುಳ್ಯದಲ್ಲಿ ಚಾಲನೆ:
ಸುಳ್ಯ ಶಾಸಕಿ ಗೈರು ಹಾಜರಿ ಹಿನ್ನಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಶೀಲ್ಧಾರ್.

ಮಹಿಳೆಯರಿಗೆ ಉಚಿತ ಪ್ರಯಾಣದ ರಾಜ್ಯ ಸರಕಾರದ ಮಹತ್ವಕಾಂಕ್ಷಿ ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಸುಳ್ಯದಲ್ಲಿ ಚಾಲನೆ ನೀಡಲಾಗಿದೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಾಗಿದ್ದ ಸಮಾರಂಭಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಗೈರು ಹಾಜರಾಗಿದ್ದರು. ಹಾಗಾಗಿ ತಹಶೀಲ್ದಾರ್ ಜಿ. ಮಂಜುನಾಥ್ ಚಾಲನೆ ನೀಡಿದ್ದಾರೆ
ಸಮಾರಂಭದಲ್ಲಿ ಅತಿಥಿಯಾಗಿದ್ದ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡರು ಮಾತನಾಡಿ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಬೇಕಾಗಿತ್ತು.ಆದರೆ ಅವರು ಮಹಿಳೆಯರಿಗೆ ಅನೂಕೂಲವಾಗಿರುವ ಯೋಜನೆಗೆ ಓರ್ವ ಮಹಿಳಾ ಶಾಸಕಿಯಾಗಿದ್ದು ಭಾಗವಹಿಸದೇ ದೂರ ಉಳಿದಿದ್ದು ಬೇಸರ ತರಿಸಿದೆ ಮಾಜೀ ಸಚಿವ ಅಂಗಾರರು ಸುಳ್ಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ ಖಂಡಿತವಾಗಿಯೂ ಆಗಮಿಸುತ್ತಿದ್ದರು. ಮುಂಚೂಣಿಯಲ್ಲಿ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಅವರನ್ನು 30 ವರ್ಷದಿಂದ ನೋಡುತ್ತಿದ್ದೇವೆ. ಇದು ಸರಕಾರಿ ಕಾರ್ಯಕ್ರಮ. ಮಹಿಳಾ‌ಸಬಲೀಕರಣದ ಕಾರ್ಯಕ್ರಮ. ನಮ್ಮ ಶಾಸಕಿ ಕೂಡಾ ಮಹಿಳೆ.ಭಾಗೀರಥಿಯವರು ಬಂದಿದ್ದರೆ ಅವರಿಗೆ ಹೂವು ಕೊಟ್ಟು ಸ್ವಾಗತಿಸಲು ನಾನೇ ಸಿದ್ಧನಾಗಿದ್ದೆ. ಸರಕಾರದ ಮುಂದಿನ ಗ್ಯಾರಂಟಿ ಚಾಲನೆ ಸಂದರ್ಭದಲ್ಲಾದರೂ ಅವರು ಬಂದು
ಸಹಕಾರ ನೀಡಲಿ ಎಂದು ಹೇಳಿದರು.ಯೋಜನೆಗೆ ಚಾಲನೆ ನೀಡಿ ತಾಹಶೀಲ್ಧಾರ್ ಮಂಜುನಾಥ್ ಮಾತನಾಡಿದರು.


ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಬಳಿಕ ಬಸ್‌ನ ಮಹಿಳಾ ಪ್ರಯಾಣಿಕರಿಗೆ ಹೂವು ನೀಡಿ, ಟಿಕೆಟ್ ನೀಡಿ ಬಸ್ ಪ್ರಯಾಣ ಉದ್ಘಾಟಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ, ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ,ನಗರ ಪಂಚಾಯತ್‌ನ ಕಾಂಗ್ರೆಸ್ ಸದಸ್ಯರಾದ ಎಂ.ವೆಂಕಪ್ಪ ಗೌಡ, ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಸಹಾಯಕ ಆಡಳಿತಾಧಿಕಾರಿ ರೇವತಿ ಸ್ವಾಗತಿಸಿದರು. ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಉಗ್ರಾಣಾಧಿಕಾರಿ ಮಂಜುನಾಥ ದೇವರಾಜ ಶೆಟ್ಟಿ ವಂದಿಸಿದರು. ಸುಳ್ಯ ಘಟಕದ ವ್ಯವಸ್ಥಾಪಕರಾದ ವಸಂತ ನಾಯ್ಕ್ ಉಪಸ್ಥಿತರಿದ್ದರು. ಪತ್ರಕರ್ತ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು. ಪ್ರಯಾಣಿಕರಿಗೆ ಹೂಗುಚ್ಛ ನೀಡಲಾಯಿತು. ಸಿಹಿ ತಿಂಡಿ ನೀಡಿ ಪ್ರಯಾಣಕ್ಕೆ ಶುಭ ಕೋರಲಾಯಿತು.

ರಾಜ್ಯ