ಜೂನ್ 11. ರಂದು ಶಕ್ತಿ ಯೋಜನೆಗೆ ಸುಳ್ಯದಲ್ಲಿ ಚಾಲನೆ : ನಾಳೆಯಿಂದ ಸರಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ

ಜೂನ್ 11. ರಂದು ಶಕ್ತಿ ಯೋಜನೆಗೆ ಸುಳ್ಯದಲ್ಲಿ ಚಾಲನೆ : ನಾಳೆಯಿಂದ ಸರಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ

ಕರ್ನಾಟಕದ ಸರಕಾರವು ಘೋಷಣೆ ಮಾಡಿರುವ ಶಕ್ತಿ ಯೋಜನೆಯ ಅಂಗವಾಗಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಉಚಿತ ಪ್ರಯಾಣದ
ಯೋಜನೆಗೆ ನಾಳೆಯಿಂದ ರಾಜ್ಯದಾಧ್ಯಂತ ಏಕ ಕಾಲದಲ್ಲಿ ಚಾಲನೆ ದೊರೆಯಲಿದೆ. ಅದರಂತೆ ಸುಳ್ಯ ಬಸ್ ನಿಲ್ದಾಣದಲ್ಲಿಯೂ ಈ ಯೋಜನೆ ಚಾಲನೆಯಾಗಲಿದ್ದು ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಸಮಾರಂಭದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ತಹಶೀಲ್ದಾರ್‌ರವರು ವೇದಿಕೆಯಲ್ಲಿ ಇರಲಿದ್ದಾರೆ. ಸಾರ್ವಜನಿಕರು ಮತ್ತು ಬಸ್ ಪ್ರಯಾಣಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದೆ ಎಂದು ಡಿಪ್ಪೋ ಮೆನೇಜರ್ ವಸಂತಕುಮಾರ್ ತಿಳಿಸಿದ್ದಾರೆ.

ರಾಜ್ಯ