ಅಡ್ತಲೆ : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಸಚಿವ ಎಸ್ ಅಂಗಾರ ಹಾಗೂ ಹಾಲಿ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ :ಅನುದಾನ ಒದಗಿಸಿದ ಅಂಗಾರರಿಗೆ ನಾಗರೀಕ ಸನ್ಮಾನ.

ಅಡ್ತಲೆ : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಸಚಿವ ಎಸ್ ಅಂಗಾರ ಹಾಗೂ ಹಾಲಿ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ :ಅನುದಾನ ಒದಗಿಸಿದ ಅಂಗಾರರಿಗೆ ನಾಗರೀಕ ಸನ್ಮಾನ.

ಅಡ್ತಲೆ ವಾರ್ಡಿನಲ್ಲಿ ಅಭಿವೃದ್ಧಿ ಆಗಿರುವ ವಿವಿಧ
ಕಾಮಗಾರಿಗಳ ಲೋಕಾರ್ಪಣೆ ಹಾಗೂ ಕಾಮಗಾರಿಗಳಿಗೆ ಅನುದಾನ ಒದಗಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಸಚಿವರಾದ ಎಸ್ ಅಂಗಾರ ರವರಿಗೆ ನಾಗರಿಕ ಸನ್ಮಾನ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿಯಾಗಿ ಆಯ್ಕೆಯಾದ ಕು. ಭಾಗೀರಥಿ ಮುರುಳ್ಯ ರವರಿಗೆ ಅಭಿನಂದನಾ ಸಮಾರಂಭ ಜೂ.10 ರಂದು ಅಡ್ತಲೆ ಶಾಲಾ ವಠಾರದಲ್ಲಿ ನಾಗರಿಕ ಹಿತ ರಕ್ಷಣಾ ವೇದಿಕೆ ಅಡ್ತಲೆ ಮತ್ತು ನಾಗರಿಕರು ಸಹಭಾಗಿತ್ವದಲ್ಲಿ ನೆರವೇರಿತು.


ಅಡ್ತಲೆ ಭಾಗದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳ ರೂವಾರಿ ಮಾಜಿ ಸಚಿವರಾದ ಎಸ್ ಅಂಗಾರ ಹಾಗೂ ನೂತನ ಶಾಸಕಿ ಭಾಗೀರಥಿ ಮುರುಳ್ಯ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿದರು. ಸಭಾ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಿಕ ಹಿತರಕ್ಷಣಾ
ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ
ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ರಮೇಶ್ ಕ್ಷೇತ್ರ
ಶಿಕ್ಷಣಾಧಿಕಾರಿಗಳು ಸುಳ್ಯ, ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ
ಹರಿಣಿ ದೇರಾಜೆ, ಮಾಜಿ ಜಿ.ಪಂ.ಸದಸ್ಯೆ ಹರೀಶ್
ಕಂಜಿಪಿಲಿ, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ
ಸಂತೋಷ್ ಕುತ್ತಮೊಟ್ಟೆ, ಗ್ರಾ.ಪಂ.ಸದಸ್ಯ ಕೇಶವ ಅಡ್ತಲೆ, ಗ್ರಾ.ಪಂ.ಉಪಾಧ್ಯಕ್ಷೆ ಕು. ಶ್ವೇತ ಅರಮನೆಗಯ,
ಗ್ರಾ.ಪಂ.ಸದಸ್ಯೆ ಶ್ರೀಮತಿ ಸುಜಯ ಲೋಹಿತ್ ಮೇಲಡ್ತಲೆ, ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ ಬೆದ್ರುಪಣೆ,ಅಡ್ತಲೆ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಗ. ಗೊಪಾಲಕೃಷ್ಣ ಪಿಂಡಿಮನೆ, ಅರಂತೋಡು ಕ್ಲಸ್ಟರ್ ಮೇಲ್ವಿಚಾರಕಿ ಶ್ರೀಮತಿ ಮಮತಾ, ಶಾಲಾ ಮುಖ್ಯ ಶಿಕ್ಷಕ
ಮಾಧವ ಕಿರ್ಲಾಯ ಹಾಗೂ ನಾಗರಿಕ ಹಿತರಕ್ಷಣಾ
ವೇದಿಕೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು
ಉಪಸ್ಥಿತರಿದ್ದರು. ನಾಗರಿಕ ಹಿತರಕ್ಷಣಾ ವೇದಿಕೆಯ
ಉಪಾಧ್ಯಕ್ಷ ಲೋಹಿತ್ ಸ್ವಾಗತಿಸಿದರು.

ರಾಜ್ಯ