ಸುಳ್ಯದಲ್ಲಿದೆ ವಿದ್ಯುತ್ ಸಂಪರ್ಕ ವಂಚಿತ ಕುಟುಂಬ : ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಇದ್ದರೂ ಇವರಿಗಿಲ್ಲ ಪಡೆಯುವ ಭಾಗ್ಯ.

ಸುಳ್ಯದಲ್ಲಿದೆ ವಿದ್ಯುತ್ ಸಂಪರ್ಕ ವಂಚಿತ ಕುಟುಂಬ : ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಇದ್ದರೂ ಇವರಿಗಿಲ್ಲ ಪಡೆಯುವ ಭಾಗ್ಯ.

ಸುಳ್ಯ ತಾಲೂಕಿನ ಮಲೆ ಪ್ರದೇಶ ದಲ್ಲಿ ವಾಸಿಸುತ್ತಿರುವ ಮಲೆಕುಡಿಯ ಕುಟುಂಬದ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದೆ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದಾರೆ.

ಸುಳ್ಯ ತಾಲೂಕಿನ ಕೂತುಕ್ಕುಂಜ ಗ್ರಾಮ,ಪಂಜದಿಂದ ಸುಮಾರು 10ಕಿಮಿ ದೂರದ ಮಲೆ ಪ್ರದೇಶ ದಲ್ಲಿ 12 ವರ್ಷದಿಂದ ಲೋಕಯ್ಯ ಮಲೆಕುಡಿಯ ಕುಟುಂಬ ವಾಸಿಸುತ್ತಿದ್ದಾರೆ. ಗುಡ್ಡ ಪ್ರದೇಶದಲ್ಲಿ ವಾಸಿಸುತ್ತಿರುವ ಈ ಕುಟುಂಬಕ್ಕೆ ಕೃಷಿಯೇ ಜೀವಾಳವಾಗಿದ್ದು, ಇನ್ನೂ ಇವರ ಮನೆಗೆ ಕರೆಂಟ್ ಭಾಗ್ಯ ಸಿಕ್ಕಿಲ್ಲ. ಆದ್ರೆ ವಿದ್ಯುತ್ ಕೊರತೆಯಿದ್ದರೂ ಲೋಕಯ್ಯ ಮಕ್ಕಳು ಮಾತ್ರ ಪದವೀಧರರಾಗಿದ್ದಾರೆ.

ಇನ್ನು ನಗರ ಪ್ರದೇಶದದಿಂದ ದೂರ ಉಳಿದು ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಲೋಕಯ್ಯ ಎಂಬವರ ಮನೆ ಹೊರತು ಪಡಿಸಿ ಸುಮಾರು 1 ಕಿಮಿ ವ್ಯಾಪ್ತಿಯಲ್ಲಿರುವ 12 ಮನೆಗಳಿಗೂ ವಿದ್ಯುತ್ ವ್ಯವಸ್ಥೆ ಇದ್ದು, ಆದ್ರೆ ಮೆಸ್ಕಾಂ ಇಲಾಖೆಯು ಲೋಕಯ್ಯ ಮಲೆಕುಡಿ ಕುಟುಂಬದ ಮನೆಗೆ ವಿದ್ಯುತ್ ಮಂಜೂರಾತಿ ಆದರೂ ವಿದ್ಯುತ್ ಸಂಪರ್ಕ ಕಲ್ಪಿಸದೇ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ.

ಸಧ್ಯ ಸ್ವಂತ ಖರ್ಚಿನಿಂದಲೇ ಸುಮಾರು 5 ಕಿ.ಮಿ ಮಾರ್ಗ ನಿರ್ಮಾಣ ಮಾಡಿದ ಈ ಕುಟುಂಬ ಹಿರಿಯರ ಭೂಮಿಯಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನಿರಂತರ ಹೋರಾಟ ಮಾಡುತ್ತಿದ್ದಾರೆ. ಗೃಹಜ್ಯೋತಿ ಯೋಜನೆಗೆ ಕಾತುರರಾಗಿರುವ ಜನರ ನಡುವೆ, ವಿದ್ಯುತ್ ಸಂಪರ್ಕವಿಲ್ಲದೆ ಈ ಕುಟುಂಬ ಕೊರಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು, ಈ ಕುಟುಂಬದ ಸಮಸ್ಯೆ ನನ್ನ ಗಮನಕ್ಕೆ ಬಂದಿರಲಿಲ್ಲ, ಈ ಸಮಸ್ಯೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಅತೀ ಶೀಘ್ರದಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಿ, ಬಡ ಕುಟುಂಬದ ಸಮಸ್ಯೆಗೆ ಸ್ಪಂದಿಸುತ್ತೇವೆ ಎಂದರು.

ವರದಿ : ಶಿವ ಭಟ್ ಸುಬ್ರಹ್ಮಣ್ಯ.

ರಾಜ್ಯ