ಆಲೆಟ್ಟಿ : ಮಿತ್ತಡ್ಕದಲ್ಲಿ ಬೈಕ್ ಮತ್ತು ಒಮಿನಿ ಕಾರ್ ಮುಖಾ ಮುಖಿ ಮೂವರಿಗೆ ಗಾಯ.

ಆಲೆಟ್ಟಿ : ಮಿತ್ತಡ್ಕದಲ್ಲಿ ಬೈಕ್ ಮತ್ತು ಒಮಿನಿ ಕಾರ್ ಮುಖಾ ಮುಖಿ ಮೂವರಿಗೆ ಗಾಯ.

ಕಾರು ಬೈಕ್ ನಡುವೆ ಅಪಘಾತ ಸಂಭವಿಸಿ ಮೂವರು ಗಾಯಗೊಂಡ ಘಟನೆ ಜೂ.2 ರಂದು ಸುಳ್ಯದಲ್ಲಿ ವರದಿಯಾಗಿದೆ.


ಸುಳ್ಯ ಸಮೀಪ ಆಲೆಟ್ಟಿ ಯಿಂದ ಕೇರಳ ಅಂತರ್ ರಾಜ್ಯ ಸಂಪರ್ಕಿಸುವ ರಸ್ತೆಯ ಮಿತ್ತಡ್ಕ ಒಮಿನಿ ಕಾರು ಮತ್ತು ಪಲ್ಸರ್ ಬೈಕಿನ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಗಾಯಗೊಂಡವರು ಬೈಕ್ ಸವಾರ ಆಲೆಟ್ಟಿ ಸರಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಸುನಿಲ್ ಮತ್ತು ಕಾರು ಚಾಲನೆ ಮಾಡುತ್ತಿದ್ದ ಆಲೆಟ್ಟಿಯ ನಿವೃತ ಶಿಕ್ಷಕ ಶೇಷಪ್ಪ, ಹಾಗೂ ಅವರ ಪತ್ನಿ ಎಂದು ತಿಳಿದು ಬಂದಿದೆ ತಿರುವೊಂದರಲ್ಲಿ ಎರಡೂ ವಾಹನ ಮುಖಾಮುಖಿ ಡಿಕ್ಕಿಯಾಗಿದೆ, ಕಾರು ಮತ್ತು ಬೈಕ್ ನಜ್ಜುಗುಜ್ಜಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ

ರಾಜ್ಯ