ಅರಂಬೂರು ಶಾರ್ಟ್ ಸರ್ಕ್ಯೂಟ್ ನಿಂದ ಲಾರಿಯಲ್ಲಿ ಬೆಂಕಿ: ಅಗ್ನಿ ಶಾಮಕದಳದ ಕ್ಷಿಪ್ರ ಕಾರ್ಯಾಚರಣೆ : ಅಪಾಯದಿಂದ ಪಾರು.

ಅರಂಬೂರು ಶಾರ್ಟ್ ಸರ್ಕ್ಯೂಟ್ ನಿಂದ ಲಾರಿಯಲ್ಲಿ ಬೆಂಕಿ: ಅಗ್ನಿ ಶಾಮಕದಳದ ಕ್ಷಿಪ್ರ ಕಾರ್ಯಾಚರಣೆ : ಅಪಾಯದಿಂದ ಪಾರು.

ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಅರಂಬೂರು ಸರಳಿಕುಂಜ ಸಮೀಪದಲ್ಲಿ ಲಾರಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಸಂಭವಿಸಿ ಅಗ್ನಿಶಾಮಕ ದಳದ ಕಾರ್ಯಾಚರಣೆ ಬಳಿಕ ಸಂಭಾವ್ಯ ಬಾರೀ ಅನಾಹುತ ತಪ್ಪಿದಂತಾಗಿದೆ.


ಅರಂಬೂರು ಕಡೆಯಿಂದ ಸುಳ್ಯಕಡೆಗೆ ಗುಜುರಿ ವಸ್ತು ಹೇರಿಕೊಂಡು ಬರುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಲು ಆರಂಬಿಸಿತ್ತೆಂದು ಹೇಳಲಾಗಿದೆ, ಕೂಡಲೇ ಸ್ಥಳಿಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ತಿಳಿಸಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸಿ ಬಾರೀ ಅನಾಹುತ ತಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ