ಕುಸ್ತಿಪಟುಗಳ ಹೋರಾಟ ಬಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ನಟ ಕಿಶೋರ್

ಕುಸ್ತಿಪಟುಗಳ ಹೋರಾಟ ಬಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ನಟ ಕಿಶೋರ್

ಬೆಂಗಳೂರು: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ
ಕಿರುಕುಳ ನೀಡಿದ ಆರೋಪಿ, ಭಾರತೀಯ ಕುಸ್ತಿ
ಫೆಡರೇಷನ್ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್‌ನನ್ನು ಬಂಧಿಸಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳ ವಿರುದ್ಧ ದೆಹಲಿ ಪೊಲೀಸರ ಕ್ರಮಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್
ಒಂದನ್ನು ಹಂಚಿಕೊಂಡಿರುವ ನಟ ಕಿಶೋರ್, ಹಿಜಾಬ್
ಹೋರಾಟ ಮತ್ತು ದೆಹಲಿಯಲ್ಲಿ ಕುಸ್ತಿಪಟುಗಳು
ನಡೆಸುತ್ತಿರುವ ಹೋರಾಟದ ಬಗ್ಗೆ ತಮ್ಮದೇ ಆದ
ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.

‘ಜಂತರ್ ಮಂತರ್ ನಲ್ಲಿ ಲೈಂಗಿಕ ದೌರ್ಜನದ ವಿರುದ್ಧ
ಧರಣಿ ಕುಳಿತ ಹೆಣ್ಣುಮಕ್ಕಳು, ಅತ್ಯಾಚಾರಿಯ ಹೂಂಕಾರ,
ಆಗಾಗ ಆ ಹೆಣ್ಣುಮಕ್ಕಳ ಮೇಲೇ ತನ್ನ ಶಕ್ತಿ ತೋರಿಸುವ
ನರಸತ್ತ ಪೊಲೀಸ್, ಕಮಕ್ ಕಿಮಕ್ ಅನ್ನದೇ
ಅತ್ಯಾಚಾರಿಗೆ ಪರೋಕ್ಷ ಬೆಂಬಲ ಕೊಟ್ಟು ಕುಳಿತ ಏಕವ್ಯಕ್ತಿ
ಸರ್ಕಾರವಾದ ಪ್ರಧಾನಿ…. ಆಗ ಹೊರಟದ್ದು ..
ವಿಶ್ವಮಟ್ಟದ ತಾರೆಯರಿಗೇ ಹೀಗಾದರೆ ನಮ್ಮಂಥ
ಸಾಮಾನ್ಯರಿಗಾದರೆ ಹೇಗೆ ಎಂಬ ಜನಸಾಮಾನ್ಯರ
ಉದ್ಗಾರ…ಇಷ್ಟು ಸಾಲದೇ, ಶತಮಾನಗಳು ಹೋರಾಡಿ
ವಿಶ್ವದ ಉತ್ತುಂಗಕ್ಕೇರಿದ ಹೆಣ್ಣು ಮಕ್ಕಳನ್ನು, ಅವರ
ಬೆಂಗಾವಲಾಗಿ ನಿಂತ ದೇಶದ ತಾಯಿ ತಂದೆಯರೇ ಮತ್ತೆ
ಬೆಂಗಾವಲಾಗಿ ನಿಂತೆ ದೇಶದ ತಾಯಿ ತಂದೆಯರೇ ಮತ್ತೆ
ಮನುವಿನ ಕಲ್ಪನೆಯ ನಾಲ್ಕು ಗೋಡೆಗಳ ಕೂಪಕ್ಕೆ
ತಳ್ಳಲು”
‘ಭಾರತಾಂಬೆ ಅಂದು ಹಿಜಾಬಿನಲ್ಲಿ ಇಂದು ಜಂತರ್
ಮಂತರ್ ಅಖಾಡದಲ್ಲಿ ಮನುವಾದಿಗಳಿಗೆ
ಸವಾಲೆಸೆಯುತ್ತಲೇ ಬಂದಿದ್ದಾಳೆ. ಜೈ ಭಾರತಾಂಬೆ”
ಎಂದು ಕಿಶೋರ್ ಬರೆದುಕೊಂಡಿದ್ದಾರೆ.
”ದೇಶದ ಹೆಮ್ಮೆಯ ಹೆಣ್ಣು ಮಕ್ಕಳನ್ನು ಜೈಲಿಗೆ ತಳ್ಳಿ
ಪಟ್ಟಾಭಿಷೇಕ ಮಾಡಿಕೊಳ್ಳುತ್ತಿರುವ ಈ ದೇಶದ ಹೊಸ
ರಾಜ ನರೇಂದ್ರ ಮೋದಿಗೆ ಬಹುಪರಾಕ್ ಬಹುಪರಾಕ್’
ಎಂದು ಕಿಶೋರ್ ಮತ್ತೊಂದು ಪೋಸ್ಟ್
ಹಂಚಿಕೊಂಡಿದ್ದಾರೆ.

ರಾಜ್ಯ