
ಭ್ರಷ್ಟಾಚಾರ ಮುಕ್ತವಾಗಿ ಕೆಲಸ ಮಾಡುವವರು ಮಾತ್ರ
ಇಲ್ಲಿರಿ. ಹಾಗೆ ಇರಲು ಇಷ್ಟವಿಲ್ಲದಿದ್ದರೆ ನಮಗೆ ತಿಳಿಸಿ
ಅವರನ್ನು ಬೇರೆಡೆಗೆ ಕಳುಹಿಸುವ ಕೆಲಸ ಮಾಡುತ್ತೇವೆ,
ಭ್ರಷ್ಟಾಚಾರ ತಡೆಯಲು ಯುವಕರ ತಂಡ ರಚನೆ
ಮಾಡುತ್ತೇವೆ.ಬ್ರಷ್ಟಾಚಾರ ಪ್ರಕರಣವನ್ನು ಪತ್ತೆ ಮಾಡಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದರೂ ಸುಳ್ಯದ ಅಧಿಕಾರಿಗಳು ಮಾತ್ರ ಬಿಜೆಪಿ ಆಡಳಿತದ ಗುಂಗಿನಿಂದ ಹೊರ ಬಂದಿಲ್ಲ.
ಜನಪ್ರತಿನಿಧಿಗಳು ಕರೆ ಮಾಡಿ ಸಾರ್ವಜನಿಕ ಸಮಸ್ಯೆಯನ್ನು ಹೇಳಿಕೊಂಡರೆ ಸ್ಪಂದಿಸುವುದಿಲ್ಲ . ಆದ್ದರಿಂದ ಎಚ್ಚೆತ್ತುಕೊಂಡು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸುಳ್ಯ
ನಗರ ಪಂಚಾಯತ್ ಸದಸ್ಯ, ಕಾಂಗ್ರೆಸ್ ಮುಖಂಡ
ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.



ಮೇ.27 ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ
ನಡೆಸಿದ ಅವರು, “ ಸುಳ್ಯ ನಗರದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ನೀರೆಲ್ಲ ರಸ್ತೆಯಲ್ಲಿ ಹರಿಯುತ್ತಿದೆ. ಅಧಿಕಾರಿಗಳಿಗೆ ಹೇಳಿದರೂ ಸ್ಪಂದನೆ ನೀಡುತ್ತಿಲ್ಲ ನನ್ನ ವಾರ್ಡ್ ನಲ್ಲಿ ಮಳೆ ನೀರು ರಸ್ಥೆಯಲ್ಲಿ ಹರಿಯುತ್ತಿದೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಸ್ಥಿತಯನ್ನು ಗಮನಕ್ಕೆ ತರಲಾಗಿದೆ ಜೆ ಸಿ ಬಿ ಬಳಸಿ ಕಾಮಗಾರಿ ನಡೆಸುತ್ತೇವೆ ಎಂದು ಹೇಳಿಹೋದವರು ಪತ್ತೆಯೇ ಇಲ್ಲ , ಹೀಗಾದಲ್ಲಿ ಅದಿಕಾರಿಗಳ ವಿರುದ್ದ ಸರಕಾರಕ್ಕೆ ದೂರು ನೀಡಲು ಹಿಂಜರೆಯುವುದಿಲ್ಲ,ನಗರದ ಶಾಂತಿನಗರದಲ್ಲಿ ತಾಲೂಕು ಕ್ರೀಡಾಂಗಣದ ಮಣ್ಣು ಕುಸಿಯುವ ಭೀತಿಯಲ್ಲಿದೆ. ಕ್ರೀಡಾಂಗಣದ ಕೆಳ ಭಾಗದಲ್ಲಿ ಮನೆ ಕಟ್ಟಿರುವವರು ಆತಂಕದಲ್ಲಿದ್ದಾರೆ. ಆದ್ದರಿಂದ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.ಸರಿಯಾದ ರೀತಿಯಲ್ಲಿ ಕೆಲಸ ಮಾಡದಿದ್ದರೆ ಮುಂದಿನ ನ.ಪಂ. ಸಾಮಾನ್ಯ ಸಭೆಯಲ್ಲಿ ಈ ಕುರಿತು ಲೋಕಾಯುಕ್ತ ತನಿಖೆಗೆ ಬರೆಯಲು ಒತ್ತಾಯಿಸುತ್ತೇವೆ ಎಂದು ಹೇಳಿದರು.
ತಾಲೂಕಿನಲ್ಲಿ ಸಮಸ್ಯೆಗಳ ಆಗರ ಹಲವು ಇದೆ. ಸರಿ
ಪಡಿಸಲು ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ಪಂದನೆ ಇಲ್ಲ.ಅವರು ಬಿಜೆಪಿ ಸರಕಾರದ ಗುಂಗಿನಲ್ಲಿದ್ದಾರೆ. ಇದೆಲ್ಲವನ್ನು ನಾವು ಅರಿತಿದ್ದೇವೆ. ಜನರಿಗೆ ಸರಿಯಾಗಿ ಸೇವೆ ನಿಡುವವರು ಇಲ್ಲಿದ್ದರೆ ಸಾಕು ಬ್ರಷ್ಟಾಚಾರಿಗಳನ್ನು ಕಳಿಸುವಲ್ಲಿಗೆ ಕಳಿಸುತ್ತೇವೆ ಎಂದರು.
ಕಾಂಗ್ರೇಸ್ ನುಡಿದಂತೆ ನಡೆಯುತ್ತದೆ ಗ್ಯಾರಂಟಿ ಬಗ್ಗೆ ಯಾವುದೇ ಸಂಶಯ ಬೇಡ.
ಕಾಂಗ್ರೇಸ್ ನುಡಿದಂತೆ ನಡೆಯುತ್ತದೆ ಗ್ಯಾರಂಟಿ ಬಗ್ಗೆ ಯಾವುದೇ ಸಂಶಯ ಬೇಡ. ಮಾತು ಕೊಟ್ಟಂತೆ ಅಧಿಕಾರಕ್ಕೆ ಬಂದ 24 ಯಲ್ಲಿ ಗ್ಯಾರಂಟಿ ಘೋಷಣೆಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಅದನ್ನು ಜಾರಿಗೊಳಿಸಲು ಹಣಕಾಸು ಕ್ರೂಡಿಕರಣ ಮತ್ತು ಪೋಲಾಗಿವಿಕೆಯನ್ನು ತಡೆಯುವಿಕೆ ಮಾಡಲಾಗುತ್ತಿದೆ.ಇದನ್ನು ಪ್ರಶ್ನೆ ಮಾಡುತ್ತಿರುವವರು ಬಿ ಜೆಪಿಯವರು, ಕಾಂಗ್ರೇಸ್ ಗೆ ಮತ ನೀಡಿದವರಿಗೆ ಸರಕಾರದಲ್ಲಿ ವಿಶ್ವಾಸವಿದೆ,2014 ರಲ್ಲಿ ಮೋದಿಯವರು ಕಪ್ಪು ಹಣ ತಂದು 15 ಲಕ್ಷ
ಎಲ್ಲರಿಗೂ ಕೊಡುತ್ತೇವೆ ಎಂದಿದ್ದರು ಇದುವರೆಗೆ
ಕೊಟ್ಟಿದ್ದಾರ?. ಜನ್‌ಧನ್ ಯೋಜನೆಯ ಅಕೌಂಟ್
ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದ ಪ್ರಶ್ನೆ ಮಾಡಿದರು. ಕಾಂಗ್ರೆಸ್ ಅವರಹಾಗೆ ಮಾಡುವುದಿಲ್ಲ. ಕೊಟ್ಟ ಮಾತು ಉಳಿಸುತ್ತೇವೆ ಎಂದು ಹೇಳಿದರು.

ಕ್ರೀಯೆ ಪ್ರತಿಕ್ರೀಯೆ ಮಾಡಬೇಕಾದೀತು.
ವಳಲಂಬೆಯಲ್ಲಿ ಮತ್ತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯ ಮಂತ್ರಿ ಡಿ .ಕೆ.ಶಿ ಬ್ಯಾನರ್ ಹಾಕಲಾಗಿದೆ, ಮತ್ತೆ ಬ್ಯಾನರ್ ಹಾನಿ ಮಾಡಿದಲ್ಲಿ ಬಿಜೆಪಿ ನಾಯಕರುಗಳ ಬ್ಯಾನರ್ ಗೆ ಬೆಂಕಿ ಹಚ್ಚಬೇಕಾಗಿ ಬರಬಹುದು, ಸಮಾಜದಲ್ಲಿ ಗೊಂದಲ ನೀವು ಸೃಷ್ಠಿ ಮಾಡಿದಲ್ಲಿ , ಕಾನೂನು ಕೈಗೆ ತೆಗೆದುಕೊಂಡಲ್ಲಿ ನೋಡಿ ಸುಮ್ಮನೆ ಕೂರುವವರಲ್ಲ, ಈ ಬಗ್ಗೆ ಅದಿಕಾರಿಗಳು ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ಕುರಿತು,ಸುಳ್ಯದ ಯುವಕ ಅವಹೇಳನಕಾರಿಯಾಗಿ ಕಮೆಂಟ್ ಹಾಕಿರುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪಿ.ಎಸ್.ಗಂಗಾಧರ್, ಕೆಪಿಸಿಸಿ ಸಂಯೋಜಕ
ಎಸ್.ಸಂಶುದ್ದೀನ್, ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಗರ ಪಂಚಾಯತ್
ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡೆಂಕಿರಿ,
ಡೇವಿಡ್ ಧೀರಾ ಕ್ರಾಸ್ತ ಮೊದಲಾದವರಿದ್ದರು.