
ಸಂಸ್ಕಾರದಿಂದ ಶ್ರೇಷ್ಠತೆ ಪ್ರಾಪ್ತಿ: ಸಂಸ್ಕಾರವಿಲ್ಲದ ಬದುಕು ಶೂನ್ಯವಾದುದು ,ಭಾರತೀಯ ಯೋಗ ಪರಂಪರೆ ವಿಶ್ವಮಾನ್ಯವಾಗಲಿದೆ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ ಅವರು
ಸುಳ್ಯದ ಹಳೆಗೇಟಿನ ವಿದ್ಯಾನಗರ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಕಳೆದ 23 ವರ್ಷಗಳಿಂದ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರದ ಸಮಾಪನಾ ಸಮಾರಂಭ ಹಾಗೂ ಶ್ರೀಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು .


ಭಾರತೀಯ ಸಂಸ್ಕೃತಿ ಪರಮೋಚ್ಛವಾಗಿದೆ,ಈ ಭಾರತೀಯ ಸಂಸ್ಕೃತಿಯಲ್ಲಿ ದೀರ್ಘವಾದ ಶಾಂತಿ ದೊರೆಯಬಲ್ಲುದು ,ಜ್ಞಾನ ಪೂರ್ವಕ ಆನಂದ ಮನಸ್ಸಿಗೆ ಮುದ ನೀಡುತ್ತದೆ, ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ನಾಗರಾಜ ಭಟ್ ದಂಪತಿಗಳು ಜ್ಞಾನವನ್ನು ಪಸರಿಸುತ್ತಿದ್ದು,ಇವರ ಕೊಡುಗೆ ಜೀವನದ ಕೊನೆಯ ಭಾಗದವರೆಗೂ ಕಣ್ಣು ತೆರೆಸುವ ಕೊಡುಗೆಯಾಗಿದೆ,ಪ್ರಸ್ತುತ ಕಾಲಘಟ್ಟದಲ್ಲಿ ಬ್ರಾಹ್ಮಣರಿಗೆ ರಾಜಕೀಯದಲ್ಲೂ ಟಿಕೆಟ್ ದೊರೆಯುತ್ತಿಲ್ಲ ವಿದ್ಯಾರ್ಥಿಗಳು ಐ. ಎ .ಎಸ್ , ಕೆ. ಎ. ಎಸ್ ಪರೀಕ್ಷೆಗಳನ್ನು ಬರೆಯುವುದರ ಮೂಲಕ ಸಮಾಜಕ್ಕೆ ಉಪಕಾರ ಮಾಡಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಯೋಗ ಸಂಪನ್ಮೂಲ ವ್ಯಕ್ತಿ ಎಂ.ಎಸ್.ನಾಗರಾಜ ರಾವ್ ವಹಿಸಿದ್ದರು. ಬೆಳಾಲು ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೂಂತಾರು ಅಭಿನಂದನಾ ಭಾಷಣ ಮಾಡಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಎಂ.ಗೋಪಾಲಕೃಷ್ಣ ಭಟ್ ವಗೆನಾಡು, ವೇದಿಕೆಯಲ್ಲಿದ್ದರು,ವಿದ್ಯಾ ಕುಠೀರಗಳನ್ನು ನಿರ್ಮಿಸಿ, 50 ಕ್ಕೂ ಹೆಚ್ಚು ಗ್ರಂಥಗಳನ್ನು ಸಮಾಜಕ್ಕೆ ಸಮರ್ಪಿಸಿದ ಸಂಸ್ಥೆಯಾದ ಬ್ರಹ್ಮ ಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ.) ಇಡ್ಕಿದು ಇದರ ಅದ್ಯಕ್ಷ ರಮೇಶ್ ಭಟ್ ರವರಿಗೆ , ಕಂಚಿ ಕಾಮಕೋಟಿ ಪೀಠ ಆಸ್ಥಾನದ ವಿದ್ವಾಂಸ, ವಯಲಿನ್ ಕಲಾವಿದ ವಿದ್ವಾನ್ ರಾಜೇಶ್ ಕುಂಭಕ್ಕೋಡು ಅವರಿಗೆ “ಶ್ರೀ ಕೇಶವ ಸ್ಮೃತಿ 2023 ಪ್ರಶಸ್ತಿ” ಪ್ರದಾನ ಮಾಡಲಾಯಿತು ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಪ್ರತಿಭೆ ಆದಿತ್ಯನಾಥರವರಿಗೆ ” ಶ್ರೀ ಕೇಶವ ಸರ್ವ ಪ್ರಥಮ ಯೋಗ್ಯತಾ ಪ್ರಶಸ್ತಿ” ನೀಡಲಾಯಿತು.ಅಲ್ಲದೆ ಯಜ್ರುವೇದ ವಿಬಾಗದಲ್ಲಿ ಕಲಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಶ್ರೇಯಸ್ ಪಿದಮಲೆಯವರಿಗೆ ಶ್ರೀ ಕೇಶವ ಸರ್ವ ಪ್ರಥಮ ಪ್ರಶಸ್ತಿ, ಋಗ್ವೇದ ವಿಭಾಗದಲ್ಲಿ ಕಲಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಆರ್ಯನ್ ಎ ಕೆ ಯವರಿಗೆ ಶ್ರೀ ಕೇಶವ ಸರ್ವ ಪ್ರಥಮ ಪ್ರಶಸ್ತಿ, ಮತ್ತು ಸರ್ವಾಂಗೀಣ ಪ್ರತಿಭಾ ವಿದ್ಯಾರ್ಥಿ ಚಿನ್ಮಯ ರವರಿಗೆ ಶ್ರಿ ಕೇಶವ ಪ್ರತಿಭಾ ಪುರಸ್ಕಾರ ನೀಡಲಾಯಿತು, ಮತ್ತು ಸ್ವಾತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ಕೇಂದ್ರ ಸರಕಾರದಿಂದ ನಡೆಸಲಾದ ವೇದ ಪಾಠ, ಕಲಾ ಪಾಠಗಳಲ್ಲಿ ಶಿಭಿರದ ವಿದ್ಯಾರ್ಥಿಗಳು ಭಾಗವಹಿಸಿದ್ದು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಪ್ರಧಾನ ಮಾಡಲಾಯಿತು . ಶ್ರೀ ಕೇಶವ ಕೃಪಾದ ಶ್ರೀ ವತ್ಸ ಸ್ವಾಗತಿಸಿ,ಶಿಬಿರದ ಸಂಚಾಲಕ ಅಭಿರಾಮ ಶರ್ಮ ವಂದಿಸಿದರು, ಶ್ರೀ ದೇವಿ ನಾಗರಾಜ್ ಭಟ್ ಕಾರ್ಯಕ್ರಮ ನಿರೂಪಿಸಿದರು.






