ವಿಟ್ಲ ಕಬಕ ಭಾಗದಲ್ಲಿ ಜೆ ಡಿ ಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಮತ ಪ್ರಚಾರ.

ವಿಟ್ಲ ಕಬಕ ಭಾಗದಲ್ಲಿ ಜೆ ಡಿ ಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಮತ ಪ್ರಚಾರ.

ಪುತ್ತೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಚಿಲ್ತಡ್ಕ ವಿಟ್ಲ ಕಬಕ ಭಾಗದಲ್ಲಿ ಬಿರುಸಿನ ಮತ ಪ್ರಚಾರ ಮಾಡಿದರು, ಗ್ರಾಮದ ಬಡವರಿಗೆ ಮನೆಗಳು ಸಿಗುತ್ತಿಲ್ಲ, ನೈಂಟಿಫೋರ್ ಸಿ, ಮೊದಲಾದ ಭೂ ದಾಖಲೆಗಳು ಮಾಡಲು ಸಾದ್ಯವಾಗುತ್ತಿಲ್ಲ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಬ್ರಷ್ಟಾಚಾರ ತಾಂಡವವಾಡುತ್ತಿದ್ದು ಜನರು ಬೇಸತ್ತಿದ್ದಾರೆ, ಬದಲಾವಣೆ ಬಯಸಿದ್ದಾರೆ, ರೈತ ಮಿತ್ರನಾಗಿರುವ ಕುಮಾರ ಸ್ವಾಮಿ ಅಧಿಕಾರಕ್ಕೆ ಬರಲು ಜನ ಬಯಸಿದ್ದಾರೆ, ಬಡ ಜನರ, ರೈತರ, ಮಹಿಳೆಯರ , ಕೂಲಿ ಕಾರ್ಮಿಕರ, ಅಂಗನವಾಡಿ ಕಾರ್ಯಕರ್ತೆಯರ, ಅಡುಗೆ ಸಹಾಯಕರ ಬಡ ವಿದ್ಯಾರ್ಥಿಗಳ ಸಹಾಯಕ್ಕಾಗಿ ರಾಜ್ಯದಲ್ಲಿ ಕುಮಾರ ಸ್ವಾಮಿ ಆಡಳಿತದ ಜೆಡಿ ಎಸ್ ಸರಕಾರ ಬರುವಂತೆ ನೀವು ಮಾಡಬೇಕು ಈ ಕಾರಣಕ್ಕೆ ಸ್ಥಳೀಯ ವಾಗಿ ಜೆಡಿಎಸ್ ಅಭ್ಯರ್ಥಿ ಮತ ನೀಡಿ ಎಂದು ವಿನಂತಿಸಿಕೊಂಡರು.

ರಾಜ್ಯ