
ಸುಳ್ಯ ತಾಲೋಕಿನ ಆಲೆಟ್ಟಿ ಗ್ರಾಮದ ಅರಂಬೂರಿಲ್ಲಿ ದಿನಸಿ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಅಂಗಡಿಯಲ್ಲಿದ್ದ ದಿನಸಿ ಸಾಮಾಗ್ರಿಗಳು ಸುಟ್ಟು ಕರಕಲಾದ ಘಟನೆ ಎ.30 ರ ಬೆಳಿಗ್ಗೆ ಸಂಭವಿಸಿದೆ. ಅರಂಬೂರಿನ ಕರ್ನಾಟಕ ಪ್ರೈವುಡ್ ಫ್ಯಾಕ್ಟರಿಯ ಎದುರಿನಲ್ಲಿ ಇರುವ ದಿವಾಕರ ಮಾಸ್ತರ್ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಈ ಅವಘಡ ಸಂಭವಿಸಿದೆ.



ಪ್ಲೈವುಡ್ ಪ್ಯಾಕ್ಟ್ರಿ ಕಾರ್ಮಿಕ ಕಟ್ಟಡದೊಳಗಿನಿಂದ ಬೆಂಕಿಯ ಹೊಗೆಯನ್ನು ಗಮನಿಸಿದ್ದು ತಕ್ಷಣ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಅಂಗಡಿ ಕಟ್ಟಡದ ಹಿಂದುಗಡೆಯಲ್ಲಿಯೇ ದಿವಾಕರ ಮಾಸ್ತರ್ ರವರು ವಾಸ್ತವ್ಯ ವಿದ್ದುದರಿಂದ ಅವರಿಗೆ ವಿಷಯ ತಿಳಿಸಲಾಯಿತು. ಸ್ಥಳೀಯರು ಸೇರಿ ಅಂಗಡಿಯ ಶಟರ್ ತರೆಯುವ ಹೊತ್ತಿಗೆ ಎಲ್ಲಾ ಸಾಮಾಗ್ರಿಗಳು ಬೆಂಕಿಗೆಆಹುತಿಯಾಗಿತ್ತು. ವಿಷಯ ತಿಳಿದ ಸುಳ್ಯ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನಡೆಸಿದರು ಪಂಚಾಯತ್ ಸದಸ್ಯ ಸುದೇಶ್ ಅರಂಬೂರು, ಉದ್ಯಮಿ ಕೃಷ್ಣ ಕಾಮತ್, ಬಂಗಾರು ಭಾರದ್ವಾಜ್, ಹೇಮಂತ್ ಕಾಮತ್ ಹಾಗೂ ಫ್ಯಾಕ್ಟರಿ ಕಾರ್ಮಿಕರು ಮತ್ತು ಹಾಲು ಸೊಸೈಟಿಯವರು, ಸ್ಥಳೀಯರು ಸಹಕರಿಸಿದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಬೆಂಕಿ ಹತ್ತಿಕೊಂಡಿರಬಹುದೆಂದು ಅಂದಾಜಿಸಲಾಗಿದ್ದು ಅಪಾರ ನಷ್ಟ ಸಂಭವಿಸಿದೆ.
