
ಕಾಡುಪ್ರಾಣಿಗಳ ಉಪಟಳದಿಂದ ಕೃಷಿ ಕೆಲಸದಲ್ಲಿ ತೊಡಗುವ ರೈತರು ಕಂಗಾಲಾಗಿರುವ ಈ ಸಂದರ್ಭ ಚುನಾವಣೆಯ ನೆಪವೊಡ್ಡಿ ಬಂದೂಕು ಠೇವಣಿ ಇಡುವಂತೆ ಒತ್ತಾಯಿಸುತ್ತಿರುವುದು ರೈತರಿಗೆ ಮಾರಕವಾಗಿದ್ದು , ಆದೇಶದ ಬಗ್ಗೆ ಅಧಿಕಾರಿಗಳು ಮರುಪರಿಶೀಲನೆ ಮಾಡಬೇಕು , ಈ ನಿಟ್ಟಿನಲ್ಲಿ ರೈತ ಸಂಘದ ಹಿತ ಕಾಯ್ದುಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿದೆ, ರೈತರಿಗೆ ನ್ಯಾಯ ಸಿಗದಿದ್ದಲ್ಲಿ ಮತದಾನದಿಂದ ದೂರ ಉಳಿಯುವುದಾಗಿ ರೈತ ಸಂಘ ಎಚ್ಚರಿಸಿದೆ ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತ ಸಂಘದ ತಾಲೋಕು ಅಧ್ಯಕ್ಷ ಲೋಲಜಾಕ್ಷ ಬೂತಕಲ್ಲು ಮಾತನಾಡಿ
ಚುನಾವಣಾ ದಿನಾಂಶ ಪ್ರಕಟಗೊಂಡಕೂಡಲೇ ಬೆಳೆ ರಕ್ಷಣೆಗಾಗಿ ರೈತರಿಗಿತ್ತ ಬಂದೂಕನ್ನು ಸಮೀಪದ ಪೊಲೀಸು ಠಾಣೆಯಲ್ಲಿ ಠೇವಣಾತಿ ಮಾಡಬೇಕೆಂಬ ಆದೇಶ ಎಂದಿನಂತೆ ಜಾರಿಯಾಯಿತು, ಉದ್ದೇಶ, ನ್ಯಾಯ ಸಮ್ಮತ ಗಲಭೆ ರಹಿತ ಚುನಾವಣೆ. ಈ ಮೊದಲ ಚುನಾವಣೆಯ ಸಮಯದಲ್ಲಿ ಠೇವಣಾತೀಯ ಕಾರಣದಿಂದ,ಕಾಡು ಪ್ರಾಣಿಗಳ ದೆಸೆಯಿಂದ
ಆದ ಬೆಳೆ ನಷ್ಟದ ಪರಿಣಾಮವಾಗಿ ಠೇವಣಾತಿಯಿಂದ ವಿನಾಯಿತಿ ಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಒಂದನ್ನು
ರೈತರನೇಕರು ಸಲ್ಲಿಸಿದರು.
ಮನವಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾಡಳಿತ ಪೂರಕ ದಾಖಲೆಗಳೊಂದಿಗೆ ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿದರೆ ವಿನಾಯತಿಯ ಬಗ್ಗೆ ಪರಿಶೀಲಿಸಬಹುದೆಂದು ಸಿಹಿ ಸುದ್ದಿಯನ್ನು ಪತ್ರಿಕೆ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿದ್ದರು. ಗಂಭೀರವಾಗಿ ಹಾನಿ ಮಾಡುವ ಬೆಳೆಯನ್ನು ಉಳಿಸಿಕೊಳ್ಳಬಹುದೆಂಬ ಸಂತೋಷದಿಂದ ಅನೇಕ ರೈತರುಮನವಿ ಪತ್ರವನ್ನು ತೆಗೆದುಕೊಂಡು ಹೋದಾಗ ಆಶ್ಚರ್ಯ ಒಂದು ಕಾದಿತ್ತು. ಎಲ್ಲಾ ವಿಧದಿಂದ ತನಿಖೆಗೊಂಡು ಬೆಳೆ
ರಕ್ಷಣೆಗೆ ಬಂದೂಕು ಅಗತ್ಯವೆಂಬ ಕಾರಣದಿಂದ ಪರವಾನಿಗೆ ದೊರೆತಿದ್ದರೂ, ಮತ್ತೆ ಪುನಃ ಗ್ರಾಮಲೆಕ್ಕಿಗರ ಮುಂದೆ ಹೇಳಿಕೆ, ಮುಚ್ಚಳಿಕೆ, ಐದು ಜನ ಗ್ರಾಮಸ್ಥರಿಂದ ಸಹಿ ಸಂಗ್ರಹ ಮುಂತಾದ ಬೇಡಿಕೆಗಳನ್ನೆಲ್ಲಾ ಪೂರೈಸಿ, ಮನವಿ ಸಲ್ಲಿಸುತ್ತಿದ್ದಂತೆ 24.4. 23ಕ್ಕೆ ಇಟ್ಟಿದ್ದ ಕೊನೆಯ ದಿನಾಂಕವನ್ನು 13.4. 23ಕ್ಕೆ ಹಿಂದುವರಿಸಿದರು.
ತಕ್ಷಣ ಎಚ್ಚೆತ್ತುಕೊಂಡ ಆರಕ್ಷಕ ಇಲಾಖೆ 13ನೇ ತಾರೀಖಿನ ಒಳಗೆ ಬಂದೂಕನ್ನು ಠೇವಣಾತಿ ಮಾಡದೇ ಇದ್ದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಇರಿಸಿಕೊಂಡಿದ್ದೀರಿ ಎಂಬ ಬೆದರಿಕೆಯ ಮೂಲಕ ಠೇವಣಾತಿಯನ್ನ ನಿಶ್ಚಿತ ದಿನಾಂಕದೊಳಗೆ ಮಾಡಿಸಿಕೊಂಡರು. ಬೆಳೆ ಹೋದರೂ ಸಹಿಸಿಕೊಳ್ಳಬಲ್ಲೆ ಮಾನ ಹೋಗುವುದು ಸಹಿಸಿಕೊಳ್ಳಲಾರೆ ಎಂಬುದು ರೈತರೆಲ್ಲರ
ಮನೋಧರ್ಮವಾದುದರಿಂದ ಕಾನೂನನ್ನು ಪಾಲಿಸಿಕೊಂಡರು. ಮನವಿಯನ್ನೆಲ್ಲ ಸ್ವೀಕರಿಸಿದ ಜಿಲ್ಲಾಡಳಿತ ಹವಾನಿಯಂತ್ರಿತ ಕೋಣೆಯ ಒಳಗೆ ಕುಳಿತು ದಿವ್ಯದೃಷ್ಟಿಯಿಂದ ಪರಿಶೀಲಿಸಲಾಗಿ ಕೆಲವೇ ಕೆಲವು ಜನರಿಗೆ ಮಾತ್ರ ಸಮಸ್ಯೆ ಇರುವುದು ಎಂಬ ಕಾರಣದಿಂದ ಬೆರಳಣಿಕೆಯ ಮಂದಿಗೆ ವಿನಾಯಿತಿ ಕೊಟ್ಟು ಉಳಿದವರ ಮನವಿಯನ್ನು ತಿರಸ್ಕರಿಸಲಾಯಿತು. ಈ ಮೂಲಕ ವಿನಾಯಿತಿ ಎಂಬ ಪ್ರಹಸನ ಒಂದು ನಡೆದುಹೋಯಿತು.



ತಿರಸ್ಕೃತಗೊಂಡ ರೈತರ ಮನದಲ್ಲಿ ಕೆಲವಾರು ಪ್ರಶ್ನೆಗಳು ಹುಟ್ಟಿಕೊಂಡವು.
ಪ್ರತಿನಿತ್ಯವೆಂಬಂತೆ ಅಲ್ಲಲ್ಲಿ ಆಗಾಗ ಕಾಡುಪ್ರಾಣಿಗಳ ಕಾರಣದಿಂದ ಆಗುವ ಸಮಸ್ಯೆಗಳ ಬಗ್ಗೆ ಸುದ್ದಿಗಳು ಪತ್ರಿಕೆಗಳಲ್ಲಿ ಬರುತ್ತಿದ್ದರೂ ರೈತರ ಬವಣೆ ಜಿಲ್ಲಾಡಳಿತಕ್ಕೆ ಅರ್ಥವಾಗದೆ ಇದ್ದದ್ದು ಯಾಕೆ? ಮನವಿ ತಿರಸ್ಕಾರವಾಗಲು ಕಾರಣವೇನು?
ಇನ್ನು ಮುಂದಿನ ಒಂದು ತಿಂಗಳು ಆಗುವ ನಷ್ಟಗಳಿಗೆ ಹೊಣೆ ಯಾರು?
ಪೂರ್ಣ ಪ್ರಮಾಣದ ಅರಿವಿಗಾಗಿ ಮಂಗಗಳು ತಿಂದು ಬಿಸಾಡಿದ ಎಳನೀರಿನ ತುಣುಕುಗಳನ್ನು ಜಿಲ್ಲಾಡಳಿತದ ಮುಂದೆ ಪ್ರದರ್ಶಿಸಬೇಕಿತ್ತೆ?
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದು ಹೌದಾದಲ್ಲಿ, ಸಕಾರಣವಿಲ್ಲದೆ ಮನವಿಯನ್ನು ತಿರಸ್ಕರಿಸಿದ್ದು ಪ್ರಭುಗಳಿಗೆ ಮಾಡಿದ ದ್ರೋಹವಲ್ಲವೇ?
ಗಣಕಯಂತ್ರದ ಮೂಲಕ ಬೆರಳ ತುದಿಯಲ್ಲಿ ಕೆಲಸ
ಮಾಡುವ ಬದಲು ಸಮಸ್ತ ರೈತ ಬಾಂಧವರನ್ನು ಆ ವರ್ಗದಲ್ಲಿ ಸೇರಿದ್ದು ಯಾಕೆ
ಗಲಭೆಗಳು ನಡೆಯುವುದು ಕತ್ತಿ ಕಡಿತ, ಚೂರಿ ಇರಿತ, ದೊಣ್ಣೆ ಬಡಿಕೆಗೆಗಳಿಂದ ಅವುಗಳಿಗೆಲ್ಲ ಠೇವಣಾತಿಯ ಆದೇಶ ಬರುವುದು ಯಾವಾಗ?
.ವಿಷ ವರುಷ ಬರುವ ಪ್ರಭುತ್ವದ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಕಾಲದಲ್ಲಿ ಕಣ್ಣಿಗ, ಬೆಸುತ್ತಾ ಚುನಾವಣೆಗಳಲ್ಲಿ ಭಾಗವಹಿಸುವ ಅಗತ್ಯವಿದೆಯೇ? ಚುನಾವಣೆಗಳಿಂದ ದೂರ ಉಳಿಯುವತ್ತ
ಬಂದರೆ ತಪ್ಪೇ?
ಯಾರೇ ಜನಪ್ರತಿನಿಧಿಗಳಾಗಲಿ, ಯಾವುದೇ ಪಕ್ಷದ ಆಡಳಿತ ಬರಲಿ ಮುಂದಿನ ಚುನಾವಣೆಯ ಕಾಲವನ
ಈ ಸಂಬಂಧ ಯೋಚನೆ ಮಾಡುವಂತಾಗಲಿ.
ಈಗಾಗಲೇ ಠೇವಣಿ ವಿನಾಯಿತಿಗೆ ಅರ್ಜಿ ಸಲ್ಲಸದವರಿಗೆ ವಿನಾಯಿತಿ ತಡೆ ಹಿಡಿದಿದ್ದನ್ನು ಮರು
ಪರಿಶೀಲಿಸಿ ವಿನಾಯಿತಿ ನೀಡಬೇಕೇಂದು ರೈತಸಂಘ ಒತ್ತಾಯಿಸಿದೆ
ಜಿಲ್ಲಾಧಿಕಾರಿಗಳು, ಪೋಲಿಸ್ ಅಧಿಕಾರಿಗಳು, ಹಾಗೂ ಜನಪ್ರತಿನಿಧಿಗಳು ಕೂಡಲೇ ಚುನಾವಣೆಯ ಸಮಯದಲ್ಲಿ ಕೋವಿ ಪರವಾನಿಗೆ ಹೊಂದಿದ ಎಲ್ಲಾ ರೈತರಿಗೆ ಠೇವಣೆ ಇಡುವುದನ್ನು ಸಂಪೂರ್ಣ ವಿನಾಯಿತಿ ನೀಡಬೇಕು.ನೀಡದಿದ್ದಲ್ಲಿ ರೈತರು ಮತದಾನದಲ್ಲಿ ಭಾಗವಹಿಸದೇ ಕಾನೂನು ಹೋರಾಟಕ್ಕೆ ಮುಂದಾಗಲಿದ್ದೇವೆ. ಎಂದು ರೈತಸಂಘ ಸುಳ್ಯ ತಾಲೋಕು ಘಟಕ ಎಚ್ಚರಿಕೆನ್ನು ನೀಡಿದೆ. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ ಮಜಿಗುಂಡಿ, ದೇವಪ್ಪ ಕುಂದಲ್ಪಾಡಿ, ಸುಳ್ಯಕೋಡಿ ಮಾದವ ಗೌಡ,ತೀರ್ಥರಾಮ ಉಳುವಾರು,ಭರತ್ ಕುಮಾರ್ ಐವರ್ನಾಡು. ಮೊದಲಾದವರಿದ್ದರು.
