ಅಭಿವೃದ್ದಿ ಕೆಲಸಗಳನ್ನು ಮುಂದಿಟ್ಟು ಕೊಂಡೆ ಜನರ ಬಳಿಗೆ ತೆರಳುತ್ತೇವೆ: ಸಚಿವ ಅಂಗಾರ‌..            ಬಾರೀ ಅಂತರದಲ್ಲಿ ಗೆಲುವಿನ ವಿಶ್ವಾಸವಿದೆ: ಭಾಗೀರಥಿ ಮುರುಳ್ಯ.

ಅಭಿವೃದ್ದಿ ಕೆಲಸಗಳನ್ನು ಮುಂದಿಟ್ಟು ಕೊಂಡೆ ಜನರ ಬಳಿಗೆ ತೆರಳುತ್ತೇವೆ: ಸಚಿವ ಅಂಗಾರ‌.. ಬಾರೀ ಅಂತರದಲ್ಲಿ ಗೆಲುವಿನ ವಿಶ್ವಾಸವಿದೆ: ಭಾಗೀರಥಿ ಮುರುಳ್ಯ.

ಸುಳ್ಯದಲ್ಲಿ ಬಿ ಜೆ ಪಿ ಅಭ್ಯರ್ಥಿಯ ಗೆಲುವಿನ ಜವಬ್ದಾರಿ ನನ್ನ ಮತ್ತು ನಮ್ಮೆಲ್ಲರ ಮೇಲಿದೆ, ಈ ಹಿಂದೆ ಬಿ ಜೆ ಪಿ ಗೆಲುವಿಗೆ ನಡೆಸಿದ ಕಾರ್ಯತಂತ್ರ ವನ್ನು ಉಪಯೋಗಿಸಿ ಮತ್ತೊಮ್ಮೆ ಬಿ ಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ನಾವೆಲ್ಲ ಶ್ರಮ ಪಡುತ್ತೇವೆ,ನನ್ನ ಆಡಳಿತ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ, ಇಂದು ಕಾಂಗ್ರೇಸಿನವರು ಸಾಕಷ್ಟು ಅಪಪ್ರಚಾರ ಮಾಡುತ್ತಿದ್ದಾರೆ ಅವರು ಹಿಂದಿನಿಂದಲೂ ಅಪ ಪ್ರಚಾರ ಮಾಡುತ್ತಲೇ ಬಂದವರು ಆದರೆ ನಾವು ಇಂದು ನಾವು ಮಾಡಿದ ಅಭಿವೃದ್ದಿ ಕೆಲಸಗಳನ್ನು ಮುಂದಿಟ್ಟು ಕೊಂಡೆ ಜನರ ಬಳಿಗೆ ತೆರಳುತ್ತೇವೆ ಮತಯಾಚನೆ ಮಾಡುತ್ತೇವೆ ಎಂದು ಸಚಿವ ಅಂಗಾರ ಹೇಳಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿ ದ ಬಿ ಜೆ ಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಸುಳ್ಯ ತಾಲೋಕಿನಲ್ಲಿ ನಮ್ಮ ಪಕ್ಷದ ಹಿಂದಿನ ಶಾಸಕರು ಮಾಡಿದ ಅಭಿವೃದ್ದಿ ಕೆಲಸಗಳನ್ನು ಮುಂದಿಟ್ಟು ಮತ ಯಾಚಿಸುತ್ತೇನೆ, ಗೆಲುವು ನಿಶ್ಚಿತ, ನನಗೆ ಎದುರಾಳಿ ಪಕ್ಷ ಯಾವುದಿಲ್ಲ , ಎದುರಾಳಿ ಇಲ್ಲದ ರೀತಿಯಲ್ಲಿ ಬಾರೀ ಅಂತರದಲ್ಲಿ ಗೆಲುವಿನ ವಿಶ್ವಾಸವಿದೆ ಎಂದರು.ಈ ಸಂದರ್ಬದಲ್ಲಿ ಬಿಜೆಪಿ ಮಂಡಲ ಅದ್ಯಕ್ಷ ಹರೀಶ್ ಕಂಜಿಪಿಲಿ, ಎ ವಿ ತೀರ್ಥರಾಮ, ವೆಂಕಟ್ ದಂಬೆಕೋಡಿ, ನ ಪಂ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಶ್ರೀಪತಿ ಭಟ್ ಮಜಿಗುಂಡಿ, ಶುಭದಾ ಎಸ್ ರೈ ಮೊದಲಾದವರಿದ್ದರು.

ರಾಜ್ಯ