
ಸುಳ್ಯ ಮತ್ತು ಪುತ್ತೂರು ತಾಲೂಕಿನ ಗಡಿಭಾಗದಲ್ಲಿ ,ರಾಜ್ಯ ಹೆದ್ದಾರಿಯ ಮಗ್ಗುಲಲೇ ತಲೆ ಎತ್ತಿ ನಿಂತ ಶಿಕ್ಷಣ ಸಂಸ್ಥೆಗೆ ಈಗ 25 ರ ಸಂಭ್ರಮ . ಗ್ರಾಮೀಣ ಪ್ರದೇಶದಲ್ಲೂ ಅತ್ಯುತ್ತಮ ರೀತಿಯ ಗುಣಮಟ್ಟದ ಮತ್ತು ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದು ಇಪ್ಪತ್ತೈದು ವರುಷಗಳನ್ನು ಪೂರೈಸಿ ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ಅಡಿಗಲ್ಲಾಗಿರುವ ಶಿಕ್ಷಣ ಕೇಂದ್ರ ಬುಶ್ರಾ ಆಂಗ್ಲ ಮಾಧ್ಯಮ ಶಾಲೆ. ಇಂದು ಜಿಲ್ಲೆಯ ಉತ್ತಮ ಶಿಕ್ಷಣ ಕೇಂದ್ರವಾಗಿ ಹೊರಹೊಮ್ಮಿದೆ. ಮೌಲ್ಯಯುತ ಶಿಕ್ಷಣ ನೀಡುವ ಸಂಸ್ಥೆಯಲ್ಲಿ ಎಲ್ ಕೆ ಜಿ ಯಿಂದ ಹಿಡಿದು 10ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ.



ಪ್ರಶಾಂತ ವಾತಾವರಣದ ಈ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಣದ ಜೊತೆ ಜೊತೆಗೆ ಕ್ರೀಡೆ ,ಕಲೆ, ಸಾಹಿತ್ಯ ಚಟುವಟಿಕೆಯಲ್ಲೂ ಇಲ್ಲಿನ ವಿದ್ಯಾರ್ಥಿಗಳು ಅಪಾರ ಸಾಧನೆ ತೋರಿದ್ದಾರೆ ಮಾತ್ರ ವಲ್ಲದೆ ದೇಶ ವಿದೇಶಗಳಲ್ಲಿ ಉದ್ಯೋಗ ,ಸರಕಾರಿ ಕ್ಷೇತ್ರದಲ್ಲಿ ಉದ್ಯೋಗ ವಿವಿದ ಕಂಪೆನಿಗಳಲ್ಲಿ ಉದ್ಯೋಗವನ್ನು ಮಾಡುತ್ತಿದ್ದಾರೆ. ಅಝೀಝ್ ಬುಶ್ರಾ ಅವರ ಅಧ್ಯಕ್ಷ ತೆಯಲ್ಲಿ ಕಳೆದ 25 ವರ್ಷಗಳಿಂದ ಮುನ್ನಡೆಯುತ್ತಿರುವ ಬುಶ್ರಾ ಆಂಗ್ಲಮಾದ್ಯಮ ಶಾಲೆಯಲ್ಲಿ ಸುಳ್ಯ ಮತ್ತು ಪುತ್ತೂರು ತಾಲೂಕಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಸರ್ವಾಂಗಿಣ ಪ್ರಗತಿಗೆ ಆದ್ಯತೆ ನೀಡಲಾಗುತ್ತಿದೆ. ಎಸ್ ಎಸ್ ಎಲ್ ಸಿಯಲ್ಲಿ ಸತತವಾಗಿ ಶೇ.100 ಫಲಿತಾಂಶದೊಂದಿಗೆ ರಾಜ್ಯದ ಮುಂಚೂಣಿ ಸ್ಕೂಲ್‌ಗಳ ಪಟ್ಟಿಗೆ ಸೇರಿದೆ.

ಸಂಸ್ಥೆಯ ಅಧ್ಯಕ್ಷ ರೊಂದಿಗೆ ಸಾಥ್ ಆಗಿ ಅವರ ಕಿರಿಯ ಮಗ ಇಂಜಿನಿಯರ್ ಬದ್ರುದ್ದೀನ್ ಬಿ ಎ ಇವರು ಸಂಸ್ಥೆಯ ನಿರ್ದೇಶಕ ಸ್ಥಾನವನ್ನು ವಹಿಸಿ ಕಾರ್ಯಚಟುವಟಿಕೆಗಳನ್ನು ನೋಡುತ್ತಿದ್ದಾರೆ .ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್ ಗಳೊಂದಿಗೆ ತರಗತಿಗಳು ನಡೆಯಲಿದೆ .ಈ ಸಂಸ್ಥೆಯ ಲ್ಲಿ ವಿಶಾಲವಾದ ಕ್ರೀಡಾಂಗಣ , ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಗಮನ , ಪಠ್ಯ ಮಾತ್ರ ವಲ್ಲದೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ಸಹಕಾರವನ್ನು ನೀಡುತ್ತಿದೆ. ಈಗಾಗಲೇ 2023-24ನೇ ಸಾಲಿನ ಶೈಕ್ಷಣಿಕ ವರ್ಷ ಕ್ಕೆ ದಾಖಲಾತಿ ಪ್ರಾರಂಭಗೊಂಡಿದ್ದು ,
ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ನುರಿತ ಹಾಗು ಅನುಭವಿ ಶಿಕ್ಷಕ ವೃಂದ, ಆಧುನಿಕ ಕ್ಲಾಸ್ ರೂಮ್‌ಗಳು. ಇಂಗ್ಲೀಷ್ ಭಾಷಾ ಶಿಕ್ಷಣಕ್ಕೆ ಮತ್ತು ಇಂಗ್ಲೀಷ್ ಸಂವಹನಕ್ಕೆ ಮತ್ತು ವಿದ್ಯಾರ್ಥಿಯ ವೈಯುಕ್ತಿಕ ಬೆಳವಣಿಗೆಗೆ ಆದ್ಯತೆ , ಶಾಲಾ ಬೇಸಿಗೆ ರಜೆಯಲ್ಲಿ ನುರಿತ ತರಬೇತುದಾರರಿಂದ ವಿದ್ಯಾರ್ಥಿ ಗಳಿಗೆ ಉಚಿತ ಸಮ್ಮರ್ ಕ್ಯಾಂಪ್ ಮಾಡಲಾಗುತ್ತಿದೆ.

25 ರ ಸಂಭ್ರಮದಲ್ಲಿರುವ ಈ ಸಂಸ್ಥೆಯಲ್ಲಿ ಡಿಸೆಂಬರ್ ಕೊನೆಯಲ್ಲಿ ಅದ್ದೂರಿಯಾಗಿ ಸಂಭ್ರಮವನ್ನು ಆಚರಿಸಲಿದ್ದು ಇದರ ಪೂರ್ವಭಾವಿಯಾಗಿ ಈ ವರ್ಷ ನಾನಾ ಕಾರ್ಯಕ್ರಮಗಳೂ ನಡೆಯಲಿದೆ. ಸುಳ್ಯ ಪುತ್ತೂರಿನ ನಾನಾ ಗ್ರಾಮ ಗಳಿಂದ , ಮೂಲೆ ಮೂಲೆಗಳಿಂದ ಬರುವ ವಿದ್ಯಾರ್ಥಿ ಗಳಿಗೆ ಸೌಕರ್ಯ ವಾಗುವ ರೀತಿಯಲ್ಲಿ ಶಾಲಾ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಅಲ್ಲದೆ ಇಲ್ಲಿ ವಿದ್ಯಾರ್ಥಿ ಗಳ ಸ್ಕಾಲರ್ ಶಿಪ್ ಮುಂತಾದ ಕಾರ್ಯಗಳು ,ಮಾಹಿತಿ ಗಳು ಕಚೇರಿಯಿಂದಲೆ ಮಾಡಿಕೊಡುವ ವ್ಯವಸ್ಥೆ ಮಾಡಲಾಗಿದೆಯೆಂದು ಸಂಸ್ಥೆಯ ಸ್ಥಾಪಕಧ್ಯಕ್ಷರೂ ,ಅಧ್ಯಕ್ಷ ರೂ ಆದ ಬುಶ್ರಾ ಅಬ್ದುಲ್ ಅಝೀಝ್ , ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಬದ್ರುದ್ದೀನ್ ಬಿ ಎ ರವರು ಪ್ರಕಟಣೆ ಗೆ ತಿಳಿಸಿದ್ದಾರೆ.

ದಾಖಲಾತಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ನಂಬರನ್ನು ಸಂಪರ್ಕಿಸಬಹುದಾಗಿದೆ ಅಥವಾ ನೇರವಾಗಿ ಶಾಲಾ ಕಚೇರಿಗೆ ಬರಬಹುದಾಗಿದೆ.:99015 98515, 81974 68944
9972380480.
