ಸುಳ್ಯ ಹಳೆಗೇಟು ಕೇಶವ ಕಿರಣದಲ್ಲಿ ಶ್ರೀ ಕೇಶವಕೃಪಾ ವೇದ ಯೋಗ ಕಲಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ.

ಸುಳ್ಯ ಹಳೆಗೇಟು ಕೇಶವ ಕಿರಣದಲ್ಲಿ ಶ್ರೀ ಕೇಶವಕೃಪಾ ವೇದ ಯೋಗ ಕಲಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ.

ವೇದಭಾಷೆ ಅನಂತವಾದುದು; ವೇದಗಳ ಉಳಿಸುವ ಕೆಲಸವನ್ನು ಮುಂದಿನ ಪೀಳಿಗೆ ಮಾಡಬೇಕಾಗಿದೆ : ಉಮಾಕಾಂತ ಭಟ್ಟ ಕೆರೆಕೈ

ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಶ್ರೀ ಕೇಶವಕೃಪಾ ವೇದ ಯೋಗ ಕಲಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಎ.16 ರಂದು ಸುಳ್ಯ ಹಳೆಗೇಟು ಕೇಶವ ಕಿರಣ ಸಭಾಂಗಣದಲ್ಲಿ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಶಿಬಿರದ ಹಿರಿಯ ವಿದ್ಯಾರ್ಥಿ, ಬೆಂಗಳೂರಿನ Commscope R&D ಕಂಪೆನಿಯ ಇಂಜಿನಿಯರಾದ ಶ್ರೀ ಶ್ರೀನಿಧಿ ಉಪಾಧ್ಯಾಯ ಅಡಿಕೆಹಿತ್ಲು ಹಾಗೂ ಭರತನಾಟ್ಯ ಹಾಗೂ ಸಂಗೀತ ಶಿಕ್ಷಕಿಯಾದ ಶ್ರೀಮತಿ ವಿದುಷಿ ಪ್ರಾಂಜಲಿ ಉಪಾಧ್ಯಾಯ ದಂಪತಿಗಳು ನೆರವೇರಿಸಿದರು ಉದ್ಘಾಟನೆ ನೆರವೇರಿಸಿದ ಶ್ರೀ ನಿಧಿ ಉಪದ್ಯಾಯ ಮಾತನಾಡುತ್ತಾ ದೇವರ ಆರಾಧನೆ ಮಾಡುತ್ತಿದ್ದರೆ ಜೀವನದಲ್ಲಿ ಭಯಪಡಬೇಕಾಗಿಲ್ಲ, ಇಲ್ಲಿಯ ವೇದ ಶಿಬಿರದಲ್ಲಿ ಸಿಗುವ ಜ್ಞಾನ ಮತ್ತು ಸ್ನೇಹ ನನ್ನ ಬದುಕಿನ ದಾರಿದೀಪವಾಗಿದೆ, ಇಲ್ಲಿರುವ ವಾತಾವರಣ ನನ್ನ ಜೀವನದ ಮರೆಯಲಾಗದ ನೆನಪು ಎಂದರು.

ವೇದ ಶಿಬಿರದ ಅಧ್ಯಾಪಕ, ಜ್ಯೋತಿಷಿ ವೇ ಮೂ ಸುದರ್ಶನ ಭಟ್ಟ, ಉಜಿರೆ ಇವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.

ಸರಕಾರಿ ಸಂಸ್ಕೃತ ಕಾಲೇಜು, ಮೇಲುಕೋಟೆ ಇದರ ನಿವೃತ್ತ ಪ್ರಾಂಶುಪಾಲರಾದ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಇವರು ದಿಕ್ಸೂಚಿ ಉಪನ್ಯಾಸ ಮಾಡಿ ಮಾತನಾಡಿ ಭಾರತ ದೇಶ ವೇದಗಳ ಭೂಮಿ ಹಾಗಾಗಿ ಭಾರತ ದೇವ ಬೂಮಿಯಾಗಿ ಉಳಿದಿದೆ,ಮನಸ್ಸಿಗೆ ಬೇಕಾದ ಶಿಕ್ಷಣ ಮನೆಯಲ್ಲಿಯೇ ದೊರೆಯಬೇಕು,ಗುರುವಾದವನು ವಿಧ್ಯೆಯಿಂದ ತನಗೊಂದು ಹುಟ್ಟು ಕೊಡುತ್ತಾನೆ ಅದೇ ಉಪನಯನ.. ದಾರಿಯ ಅರಿವಿಲ್ಲದವನಿಗೆ ದಾರಿ ತೋರಿಸಿ ಆತನ ಗುರಿ ತಲುಪಿಸಲು ಸಾಹಾಯ ಮಾಡುವಂತೆ ವೇದ ಶಿಬಿರದ ಮೂಲಕ ದಾರಿ ತೋರಿಸುವ ಕೆಲಸ ನಾಗರಾಜ್ ಭಟ್ ದಂಪತಿಗಳು ಮಾಡುತ್ತಿದ್ದಾರೆ, ಇಂತಹ ದಂಪತಿಗಳು ಪ್ರತೀ ಊರಿನಲ್ಲಿದ್ದರೆ ಸನಾತನ ಭಾರತ ನಿರ್ಮಾಣ ಸಾಧ್ಯ , ಮಾನವ ತನ್ನ ಸಂಸ್ಕಾರದಿಂದ ಮಾಧವನಾಗಬಹುದು.. ಅಂತಹ ಸಂಸ್ಕಾರ ನೀಡುವ ಭಾಷೆ ವೇದ ಬಾಷೆ, ವೇದಭಾಷೆ ಅನಂತವಾದುದು ವೇದಗಳ ಉಳಿಸುವ ಕೆಲಸವನ್ನು ಮುಂದಿನ ಪೀಳಿಗೆ ಮಾಡಬೇಕಾಗಿದೆ ಎಂದು ಕರೆಯಿತ್ತರು.

ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದು ಶುಭಾಶಂಸನೆಯನ್ನು ಮಾಡಿದರು ಶ್ರೀ ದೇವಿ ನಾಗರಾಜ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಳೆದ 22 ವರ್ಷಗಳಿಂದ ವೇದ ಶಿಬಿರದ ನಡೆದು ಬಂದ ಹಾದಿ ಮತ್ತು ಸಹಕರಿಸಿದವರನ್ನು ನೆನಪಿಸಿಕೊಂಡರು. ಕಾ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ್ ಭಟ್ ಸ್ವಾಗತಿಸಿದರು ವೇದಾಭ್ಯಾಸಕ್ಕೆ ಆಗಮಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪಠ್ಯ ಪುಸ್ತಕಗಳೂ, ವ್ಯಾಸಪೀಠ, ಉತ್ತರೀಯ ಇತ್ಯಾದಿಗಳನ್ನು ಉಚಿತವಾಗಿ ನೀಡಲಾಯಿತು.

ರಾಜ್ಯ