ಕಾರ್ಮಾಡು : ಮಾದಕ ವಸ್ತುಗಳ ಸಾಗಾಟ : ನಾಲ್ವರ ಬಂಧನ.

ಕಾರ್ಮಾಡು : ಮಾದಕ ವಸ್ತುಗಳ ಸಾಗಾಟ : ನಾಲ್ವರ ಬಂಧನ.

ಮಡಿಕೇರಿ ಏ.16 : ಮಾದಕ ವಸ್ತುಗಳಾದ ಚರಸ್ ಹಾಗೂ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ವಿರಾಜಪೇಟೆ ಅಬಕಾರಿ ಇಲಾಖೆ ಸಿಬ್ಬಂದಿಗಳು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಕಾರ್ಮಾಡು ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಅಬಕಾರಿ ಇಲಾಖೆ ಸಿಬ್ಬಂದಿಗಳು ಕಾರೊಂದನ್ನು ತಪಾಸಣೆ ನಡೆಸಿದಾಗ ಮಾದಕ ವಸ್ತುಗಳು ಪತ್ತೆಯಾಗಿದೆ. ಅಲ್ಲದೆ ಗಾಂಜಾ ಸೇವನೆ ಮಾಡಿರುವುದು ಕಂಡು ಬಂದಿದೆ. ತಕ್ಷಣ
ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು 10 ಗ್ರಾಂ
ಚರಸ್, 35 ಗ್ರಾಂ ಗಾಂಜಾ, ಕಾರು ಸಹಿತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು.
ಆರೋಪಿಗಳಾದ ತಮಪ್ಪ ಸರ್ಕಾರ್, ಬೀಬವ್,
ದೇವಾಂಸ್ ಶರ್ಮಾ ಹಾಗೂ ಆದಿತ್ಯ ಕುಮಾರ್
ಅವರುಗಳನ್ನು ನ್ಯಾಯಾಂಗ ಬಂಧನಕ್ಕೆ
ಒಪ್ಪಿಸಲಾಗಿದೆ.ವಿರಾಜಪೇಟೆ ಉಪ ವಿಭಾಗ ಕಛೇರಿಯ
ಅಬಕಾರಿ ಉಪ ಅಧೀಕ್ಷಕ ಎಂ.ಎನ್.ನಟರಾಜು,
ಸಿಬ್ಬಂದಿಗಳಾದ ಎನ್.ಜಿ.ಮದನ್ ಕುಮಾರ್, ಸಂತೋಷ್,ಚಾಲಕ ದರ್ಶನ್ ಪೊಲೀಸ್ ಸಿಬ್ಬಂದಿ
ಸಂತೋಷ್ ಕುಮಾರ್, ಅರಣ್ಯ ಇಲಾಖಾಸಿಬ್ಬಂದಿ
ಉದಯಕುಮಾರ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯ