ಕಡಬ: ರೈಲು ಹಳಿಯಲ್ಲಿ KSRTC ಚಾಲಕನ ಮೃತ ದೇಹ ಪತ್ತೆ:ಮದ್ಯರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಕಡಬ: ರೈಲು ಹಳಿಯಲ್ಲಿ KSRTC ಚಾಲಕನ ಮೃತ ದೇಹ ಪತ್ತೆ:ಮದ್ಯರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಕಡಬ : ಕೆ.ಎಸ್.ಆರ್.ಟಿ.ಸಿ ಚಾಲಕನ ಮೃತದೇಹ ಕಾಣಿಯೂರು ರೈಲ್ವೇ ಟ್ರ್ಯಾಕ್ ನಲ್ಲಿ ಪತ್ತೆಯಾದ ಘಟನೆ ಎ.7 ರಂದು ನಡೆದಿದೆ.
ರಾತ್ರಿ ಕರ್ತವ್ಯದಿಂದ ಇಳಿದ ಪುತ್ತೂರು ವಿಭಾಗದ ಕೆಎಸ್ಆರ್ ಟಿಸಿ ಕಂಡಕ್ಟರ್ ಕಮ್ ಡ್ರೈವರ್ ಆಗಿರುವ ಕುಸುಮಾಧರ ಗೌಡ ಅಭೀರ (34 ವ.) ಮೃತಪಟ್ಟವರು.
ಸುಮಾರು 8 ವರ್ಷಗಳಿಂದ ಕೆಎಸ್ಆರ್ ಟಿಸಿ ಊದ್ಯೋಗಿಯಾಗಿದ್ದ ಮೃತರು 1 ವರ್ಷದ ಹಿಂದೆ ಮದುವೆಯಾಗಿದ್ದರು.
ದುರ್ಘಟನೆ ಕಾಣಿಯೂರು ರೈಲ್ವೇ ಟ್ರ್ಯಾಕ್ ನಲ್ಲಿ ಮಧ್ಯರಾತ್ರಿ ನಡೆದಿದ್ದು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯ