ದಂಪತಿಗಳ ಮೇಲೆ ಕಾಡುಕೋಣ ದಾಳಿ :ಆಸ್ಪತ್ರೆ ದಾಖಲು:

ದಂಪತಿಗಳ ಮೇಲೆ ಕಾಡುಕೋಣ ದಾಳಿ :ಆಸ್ಪತ್ರೆ ದಾಖಲು:

ಸಾಂದರ್ಭಿಕ ಚಿತ್ರ

ಸುಳ್ಯ: ಸೌದೆ ತರಲೆಂದು ತೆರಳಿದ್ದ ಇಬ್ಬರ ಮೇಲೆ ಕಾಡು ಕೋಣ ದಾಳಿ ನಡೆಸಿ ದಂಪತಿಗಳು ಗಾಯಗೊಂಡ ಘಟನೆ ಸುಳ್ಯ ತಾಲೋಕಿನ ದೇವಚಳ್ಳ ಗ್ರಾಮದ ಗುಡ್ಡೆ ಎಂಬ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.ಗಾಯಗೊಂಡವರು ಸುಳ್ಯ ಕೆವಿಜಿ ಆಸ್ಪತ್ರೆಗೆ ಚಿಕಿತ್ಸಗೆ ದಾಖಲಾಗಿದ್ದಾರೆ.
ಮುಂಜಾನೆ ಗುಡ್ಡೆ ಧರ್ಮಪಾಲ ಎಂಬವರು ಪತ್ನಿಯೊಂದಿಗೆ ಬೆಳಿಗ್ಗೆ 9 ಗಂಟೆಯ ವೇಳೆಗೆ ತಮ್ಮ ರಬ್ಬರ್ ತೋಟಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲೆ ಮರೆಯಲಿದ್ದ ಕಾಡುಕೋಣವೊಂದು ಏಕಾಏಕಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ.ಈ ಸಂದರ್ಭ ಒಡಲು ಯತ್ನ ಮಾಡಿದ್ದರೂ ಬಿದ್ದು ಧರ್ಮಪಾಲರ ತಲೆಯ ಭಾಗಕ್ಕೆ, ದವಡೆಗೆ ಗಂಭೀರ
ಗಾಯವಾಯಿತ್ತೆನ್ನಲಾಗಿದೆ. ಅವರ ಪತ್ನಿಗೂ
ಗಾಯವಾಗಿದ್ದು, ಇಬ್ಬರನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ
ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ
ರಾಜ್ಯ