ಸುಳ್ಯ : ಕಳ್ಳತನ ಆರೋಪದಡಿ 4 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಯ ಸೆರೆ.

ಸುಳ್ಯ : ಕಳ್ಳತನ ಆರೋಪದಡಿ 4 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಯ ಸೆರೆ.

ಕಾರು ಮತ್ತು ಬೈಕ್ ಕಳ್ಳತನದ ಆರೋಪದಡಿಯಲ್ಲಿ ಕಳೆದ 4 ವರ್ಷಗಳಿಂದ ಪೊಲೀಸರಿಂದ ತಲೆಮಾರಿಸಿಕೊಂಡಿದ್ದ
ಆರೋಪಿ ಜಟ್ಟಿಪಳ್ಳ ನಿವಾಸಿ ಅಶ್ರಫ್ ರಿಪ್ಪಾನ್
ಎಂಬಾತನನ್ನು ಕೇರಳದ ಕಣ್ಣೂರಿನಿಂದ ಸುಳ್ಯ
ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ
ಹಾಜರುಪಡಿಸಿದ್ದಾರೆ.೨೦೧೯ರಲ್ಲಿ ಕಾರು ಮತ್ತು ಬೈಕ್ ಕಳ್ಳತನದಲ್ಲಿ ಭಾಗಿಯಾಗಿದ್ದ ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಬಳಿಕ ಜಾಮೀನು ಪಡೆದು ಹೊರಬಂದ ಆರೋಪಿ ಮತ್ತೆ ನ್ಯಾಯಾಲಯಕ್ಕೆ ವಾಹಿದೆ ಸಮಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.ಅಲ್ಲದೆ ವಾರಂಟಿನಲ್ಲಿ ಇರುವ ವಿಳಾಸದಲ್ಲಿ ಆತ ವಾಸವಾಗದೆ ಪೊಲೀಸರಿಗೆ ದಸ್ತಗಿರಿಗೆ ಸಿಗದೇ ಕೇರಳಕ್ಕೆ ಹೋಗಿ ತಲೆಮರೆಸಿಕೊಂಡಿರುತ್ತಾನೆ.
ನ್ಯಾಯಾಲಯವು ಆರೋಪಿಗೆ ಹಲವಾರು ಬಾರಿ
ವಾರೆಂಟ್ ಹೊರಡಿಸಲಾಗಿದ್ದು ಪೊಲೀಸರ ಕೈಗೆ ಸಿಗದೆ
ಸತಾಯಿಸುತ್ತಿದ್ದ ಎನ್ನಲಾಗಿದೆ.ಇದೀಗ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದು,ಸುಳ್ಯ ಪೊಲೀಸ್ ಠಾಣಾ
ಉಪ ನಿರೀಕ್ಷಕ ದಿಲೀಪ್ ರವರ ಮಾರ್ಗದರ್ಶನದಂತೆ
ಪೊಲೀಸ್ ಸಿಬ್ಬಂದಿಗಳಾದ ಉಮೇಶ್ ಹಾಗೂ
ಪುರುಷೋತ್ತಮ್ ರವರು ಕೇರಳದ ಕಣ್ಣೂರಿಗೆ ತೆರಳಿ
ಆರೋಪಿಯನ್ನು ವಶಕ್ಕೆ ಪಡೆದು ಸುಳ್ಯಕ್ಕೆ ಕರೆತಂದಿದ್ದು
ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ರಾಜ್ಯ