ಪೆರಾಜೆ:ಪಯಸ್ವಿನಿ ನದಿ ಕಿನಾರೆ ಸಂಪರ್ಕ ರಸ್ತೆ ಬಂದ್ ಮಾಡಿದ ಪ್ರಕರಣ : ಕೇಳಲು ಬಂದ ಪಿ.ಡಿ.ಓ ಮತ್ತು ತಾ ಪಂ ಸದಸ್ಯರೊಂದಿಗೆ ವಾಗ್ವಾದ: ದೂರು, ಪ್ರತಿದೂರು: ಸ್ಥಳದಲ್ಲಿ ಅಕ್ರಮ ಮರ  ದಾಸ್ಥಾನು ಪತ್ತೆ: ಅಧಿಕಾರಿಗಳ ದಾಳಿ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ.

ಪೆರಾಜೆ:ಪಯಸ್ವಿನಿ ನದಿ ಕಿನಾರೆ ಸಂಪರ್ಕ ರಸ್ತೆ ಬಂದ್ ಮಾಡಿದ ಪ್ರಕರಣ : ಕೇಳಲು ಬಂದ ಪಿ.ಡಿ.ಓ ಮತ್ತು ತಾ ಪಂ ಸದಸ್ಯರೊಂದಿಗೆ ವಾಗ್ವಾದ: ದೂರು, ಪ್ರತಿದೂರು: ಸ್ಥಳದಲ್ಲಿ ಅಕ್ರಮ ಮರ ದಾಸ್ಥಾನು ಪತ್ತೆ: ಅಧಿಕಾರಿಗಳ ದಾಳಿ. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ.

ಪೆರಾಜೆ ಗ್ರಾಮದ ಪಯಸ್ವಿನಿ ನದಿಯ ಕಿನಾರೆ ಬಳಿಯ ಮುಸ್ಲಿಂ ಕುಟುಂಬವೊಂದು ಪಯಸ್ವಿನಿ ಹೊಳೆ ಸಂಪರ್ಕಿಸುವ ರಸ್ತೆಯನ್ನು ತಗಡು ಶೀಟಿನಿಂದ್ ಬಂದ್ ಮಾಡಿದ್ದು ಮಾ.8 ರಂದು ಸಂಜೆ ವೇಳೆ ಕೇಳಲು ಬಂದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ತಾ. ಪಂ ಸದಸ್ಯರೊಂದಿಗೆ ಮನೆಯವರು ವಾಗ್ವಾದ ನಡೆಸಿ ಹಲ್ಲೆಗೆ ಮುಂದಾದರು ಎಂದು ದಾರಿಯಲ್ಲಿ ಸಾಗಿಬಂದ ಕಿರಣ್ ಕುಂಬಳಚೇರಿ, ಪ್ರಕಾಶ್ ಕೊಳಂಗಾಯ ಹಾಗೂ ಮತ್ತೊರ್ವರು ಹೊಳೆಗೆ ಇಳಿವ ರಸ್ಥೆಯ ತಗಡು ಶೀಟು ತೆರವು ಮಾಡಿದ ಹಿನ್ನಲೆಯಲ್ಲಿ ಮುಸ್ಲಿಂ ಕುಟುಂಬ ಆಕ್ರೋಶಿತರಾಗಿ ಕಿರಣ್ ಮತ್ತು ಪ್ರಕಾಶ್ ಮೇಲೆ ಅಕ್ರಮ ಪ್ರವೇಶ, ಅವಾಚ್ಯ ನಿಂದನೆ ಮತ್ತು ಮಾನ ಹಾನಿಕರ ನಡವಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಸಂಪಾಜೆ ಠಾಣೆಯಲ್ಲಿ ದೂರು ದಾಖಲಿಸಿ ಇದರ,ವಿಚಾರಣೆಗೆ ಬಂದ ಪೋಲಿಸರಿಗೆ ರಸ್ತೆ ಬಂದ್ ಮಾಡಿದವರ ಮನೆಯಲ್ಲಿ ಅಕ್ರಮ ದಾಸ್ತಾನಿರಿಸಿದ್ದ ಬೀಟಿ ಹಾಗೂ ಸಾಗುವಾನಿ ಮರದ ದಿಮ್ಮಿಗಳು ಕಂಡು ಬಂದ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ಹೋಗಿ ಮರ ಮುಟ್ಟುಗೋಲು ಹಾಕಿದಲ್ಲದೆ , ಈ ಸಂದರ್ಭದಲ್ಲಿ ಮನೆಯವರ ನಡವಳಿಕೆಗೆ ಆಕ್ರೋಶಿತರಾಗಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾವಣೆಯಾಗಿ ಉದ್ವಿಗ್ನ ಸ್ಥಿತಿ ನಿರ್ಮಾಣ ವಾದ ಘಟನೆ ,ಮಾ 9 ಸಂಜೆ ವರದಿಯಾಗಿದೆ, ಮಾ.10 ರಿಂದ ಪೆರಾಜೆ ಶಾಸ್ತಾವು ದೇವಸ್ಥಾನದ ಜಾತ್ರೆ ಆರಂಭವಾಗಿ ಎ.10 ರಂದು ಒತ್ತೆಕೋಲ ಮತ್ತು ಮಾರಿಕಳ ನಡೆಯಲಿದ್ದು ಈ ಸಂದರ್ಭದಲ್ಲಿ ಗ್ರಾಮಸ್ಥರು ದೈವಕ್ಕೆ ಸಮರ್ಪಿಸುವ ಹಂದಿ, ಕೋಳಿ ಹೊಳೆ ಬದಿಯಲ್ಲಿ ಅಡುಗೆ ಮಾಡಿ ಬಡಿಸಿ ಊಟ ಮಾಡಿ ಬರುವ ಪದ್ದತಿ ತಲೆತಲಾಂತರಗಳಿಂದ ಬಂದಿದ್ದು, ಈ ರೀತಿಯ ಪ್ರಕ್ರಿಯೆ ಹೊಳೆ ಬದಿ ವಾಸಮಾಡುತ್ತಿರುವ ಫಾತಿಮ ಹಾಗು ಮಕ್ಕಳಿಗೆ ಮುಜುಗರ ವಾಗುವ ಹಿನ್ನಲೆಯಲ್ಲಿ ಅ ಕುಟುಂಬ ಕೆಲವು ವರ್ಷಗಳಿಂದ ತಕರಾರು ತೆಗೆದಿದ್ದು, ಇದು ಒಂದು ರೀತಿಯಲ್ಲಿ ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಗಿ ಗ್ರಾಮಸ್ಥರ ನಂಬಿಕೆಯನ್ನು ಪ್ರಶ್ನೆ ಮಾಡುವಂತ ಸನ್ನಿವೇಶ ಕೆಲವು ವರ್ಷದಿಂದ ನಿರ್ಮಾಣವಾಗಿತ್ತು

, ಇದೀಗ ಮತ್ತೆ ಕಳೆದ ಒಂದು ವಾರಗಳ ಹಿಂದೆ ಫಾತಿಮಾ ಮಕ್ಕಳಾದ ಅಬ್ದುಲ್ ಮುಹಿದಿ, , ನಾದಿಯಾ ,ಆಮಿನ, ಮೊದಲಾದವರು ಸೇರಿ ಹೊಳೆ ಸಂಪರ್ಕಿಸುವ ರಸ್ಥೆಯನ್ನು ತಗಡು ಶೀಟು ಹಾಕಿ ಮುಚ್ಚಿದ್ದರು, ಗ್ರಾಮಕ್ಕೆ ನೀರು ಸರಭರಾಜು ಮಾಡುವ ಜಾಕವೆಲ್ ಹಾಗೂ ಜಾತ್ರಾ ಸಮಯ ಹೊಳೆಗೆ ಇಳಿವ ಸಾರ್ವಜನಿಕ ರಸ್ಥೆ ಬಂದ್ ಮಾಡಿದ ಹಿನ್ನಲೆ ಪೆರಾಜೆ ಗ್ರಾಮ ಪಂಚಾಯತ್ ಅಧಿಕಾರಿ ಮತ್ತು ಮಾ.ತಾ‌ ಪಂ ಸದಸ್ಯ ನಾಗೇಶ್ ಕುಂದಲ್ಪಾಡಿ ಕೇಳಲು ಹೋದಾಗ ಅಬ್ದುಲ್ ಮುಹಿದಿ ತೀವ್ರ ವಿರೋಧ ವ್ಯಕ್ತ ಪಡಿಸಿದರೆಂದು ಹೇಳಲಾಗಿದೆ ಇದೇ ಸಂದರ್ಭದಲ್ಲಿ ಕುಂಬಳಚೇರಿಯಿಂದ ಪೆರಾಜೆ ಕಡೆಗೆ ಬರುತ್ತಿದ್ದ, ಕಿರಣ್ ಹಾಗೂ ಪ್ರಕಾಶ್ ಇದನ್ನು ಗಮನಿಸಿ ತಗಡು ಶೀಟು ಸರಿಸಿ ರಸ್ತೆ ಸಂಚಾರ ಸುಗಮ ಮಾಡಿದರೆಂದು, ಈ ಸಂದರ್ಭ ಆ ಮನೆಯವರು ಕಿರಣ್ ಮತ್ತು ಪ್ರಕಾಶ್ ಮೇಲೆ ಅವಾಚ್ಯ ನಿಂದನೆ ಸೇರಿದಂತೆ ವಿವಿಧ ಆರೋಪದಡಿ ದೂರು ನೀಡಿದರೆಂದು ದೂರು ಸ್ವೀಕರಿಸಿದ ಪೋಲಿಸರು ಆರೋಪಿತರಿಂದ ಮುಚ್ಚಳಿಕೆ ಬರಿಸಿಕೊಂಡರೆಂದು ಹೇಳಲಾಗಿದೆ , ಈ ಮಧ್ಯೆ ಸ್ಥಳ ಪರಿಶೀಲನೆಗೆ ಬಂದ ಪೋಲೀಸರಿಗೆ ಅಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ, ಬೀಟಿ ಹಾಗೂ ಸಾಗುವಾನಿ ಮರದ ದಿಮ್ಮಿಗಳು ಕಂಡುಬಂದಿತೆಂದು, ಕೂಡಲೆ ಅವರು ಅರಣ್ಯಾಧಿಕಾರಿಗಳ ಮಾಹಿತಿ ತಿಳಿಸಿದರೆಂದು, ಸ್ಥಳಕ್ಕೆ ಬಂದ ಅಧಿಕಾರಿಗಳ ತಂಡ ದಾಳಿನಡೆಸಿ, ಅಕ್ರಮವಾಗಿ ಮನೆಯ ಹಿಂಬಾಗದಲ್ಲಿದ್ದ ಮರಗಳನ್ನು ವಶಕ್ಕೆ ಪಡೆದಿದ್ದಾರೆ, ಈ ಸಂದರ್ಭ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿ ತಾ. ಪಂ ಸದಸ್ಯ ನಾಗೇಶ್ ಕುಂದಲ್ಪಾಡಿ ಸೇರಿದಂತೆ ಅಧಿಕಾರಿಗಳು ಸಾರ್ವಜನಿಕರನ್ನು ತೆರವಾಗುವಂತೆ ನೋಡಿಕೊಂಡರು , ಅಬ್ದುಲ್ ಮುಹಿದಿ ಮನೆಯ ಬಳಿ ಸುಮಾರು ಎರಡು ಪಿಕಪ್ಪ್ ಅಕ್ರಮ ಮರದ ದಿಮ್ಮಿಗಳು ದೊರಕಿ ಅರಣ್ಯಾಧಿಕಾರಿಗಳು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ, ಮರದ ದಿಮ್ಮಿಗಳನ್ನು ಸಂಪಾಜೆಗೆ ರಾತೋರಾತ್ರಿ ರವಾನೆ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳಾದ ವಿಜೇಯೇಂದ್ರ, ಗಸ್ತು ಅರಣ್ಯ ಪಾಲಕ ನಾಗರಾಜ್ .ಪುರುಷೋತ್ತಮ.

, ಬಾಬು, ವಸಂತ, ಮಾಧವ ಕೆ ಟಿ, ವಾಹನ ಚಾಲಕರಾದ ಭರತ್,
ಸಂಪಾಜೆ ಠಾಣಾ ಪಿ ಎಸ್ ಐ ಶ್ರೀನಿವಾಸ್, ಕಾನಸ್ಟೇಬಲ್, ಜಯಣ್ಣ, ಕರಬಸಪ್ಪ ಚಕ್ರಸಾಲಿ, ಮೊದಲಾದವರು ಭಾಗವಹಿಸಿದ್ದರು.

ರಾಜ್ಯ