
ಪುತ್ತೂರು: ಮಂಗಳೂರಿನಿಂದ ಸುಳ್ಯಕ್ಕೆ ತಂದೆ ಮಗಳು
ಪ್ರಯಾಣಿಸುತ್ತಿದ್ದ ಹುಂಡೈ ಐ10 ಕಾರೊಂದು ಕುಂಬ್ರ
ಸಮೀಪದ ಮಡ್ಯಂಗಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಫೆ.20 ರಂದು ನಡೆದಿದೆ.ತಂದೆ ಮತ್ತು ಮಗಳು ಮಂಗಳೂರಿನಿಂದ ಸುಳ್ಯಕ್ಕೆ ಪ್ರಯಾಣಿಸುತ್ತಿದ್ದು ಕಾರನ್ನು ಮಗಳು ಚಲಾಯಿಸುತ್ತಿದ್ದಳು ಎನ್ನಲಾಗಿದೆ. ಮಡ್ಯಂಗಳಕ್ಕೆ ತಲುಪುವಾಗ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.ಕಾರು ಸಂಪೂರ್ಣ ಪಲ್ಟಿಯಾಗಿ ಬಿದ್ದರೂ ಇಬ್ಬರಿಗೂ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.


