
ಕಡಬದ ತಾಲೋಕಿನ ನೆಲ್ಯಾಡಿಯ ಕುಟ್ರುಪಾಡಿಯ ಮೀನಾಡಿಯಲ್ಲಿ ಇಂದು ಬೆಳಿಗ್ಗೆ ಆನೆದಾಳಿಗೆ ಮೃತಪಟ್ಟ ಹಾಲು ಸೊಸೈಟಿಗೆ ಬರುತ್ತಿದ್ದ ಓರ್ವ ಮಹಿಳೆ ಮತ್ತು ಆಕೆಯ ರಕ್ಷಣೆಗೆ ಧಾವಿಸಿದ ಮತ್ತೋರ್ವ ವ್ಯಕ್ತಿ ಸಾವನಪ್ಪಿರುವುದು ಗ್ರಾಮಸ್ಥರಲ್ಲಿ ಆತಂಕ ಹುಟ್ಟು ಹಾಕಿದ್ದು , ಇಲಾಖಾಧಿಕಾರಿಗಳವಿರುದ್ದ ಜನರು ಆಕ್ರೋಶ ಭರಿತರಾಗಿದ್ದಾರೆ , ಸ್ಥಳಕ್ಕೆ ಧಾವಿಸಿ ಬಂದ ಜಿಲ್ಲಾದಿಕಾರಿ ರವಿ ಕುಮಾರ್, ಎ ಸಿ ಗಿರೀಶ್ ನಂದನ್ ಸೇರಿದಂತೆ ವಿವಿಧ ಅಧಿಕಾರಿಗಳು ಬೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ ಮತ್ತು ಪರಿಹಾರದ ಭರವಸೆ ನೀಡಿದ್ದಾರೆ, ಈ ಸಂದರ್ಭದಲ್ಲಿ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸೇರಿದ್ದು ಅಧಿಕಾರಿಗಳನ್ನು ತೀವ್ರ ತರಾಟೆಗೆ ಒಳಪಡಿಸಿದ್ದಾರೆ, ಹೀ ಹಿಂದೆಯ ಆನೆಗಳ ಉಪಟಳ ತಿಳಿಸಿದ್ದರೂ ಅಧೀಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ, ಕೂಡಲೇ ಆನೆಯಿಂದ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.


