ಎಂ.ಬಿ. ಫೌಂಡೇಶನ್ ನೇತೃತ್ವದ ಸಾಂದೀಪ್ ವಿಶೇಷ ಶಾಲೆಯ ನೂತನ ಕಟ್ಟಡ ಉದ್ಘಾಟನೆಗೆ ಕ್ಷಣಗಣನೆ.

ಎಂ.ಬಿ. ಫೌಂಡೇಶನ್ ನೇತೃತ್ವದ ಸಾಂದೀಪ್ ವಿಶೇಷ ಶಾಲೆಯ ನೂತನ ಕಟ್ಟಡ ಉದ್ಘಾಟನೆಗೆ ಕ್ಷಣಗಣನೆ.

ಎಂ.ಬಿ. ಫೌಂಡೇಶನ್ ವತಿಯಿಂದ ಎಂ.ಬಿ. ಸದಾಶಿವರವರು ತಮ್ಮ ಜಾಗದಲ್ಲಿ ನಿರ್ಮಿಸಿರುವ ಭಿನ್ನ ಸಾಮರ್ಥ್ಯದ ವಿಶೇಷ ಮಕ್ಕಳ ಸಾಂದೀಪ್ ವಿಶೇಷ ಶಾಲೆಯ ನೂತನ ಕಟ್ಟಡದ ಉದ್ಘಾಟನಾ
ಸಮಾರಂಭಕ್ಕೆ ಕ್ಷಣ ಗಣನೆ ಆರಂಭವಾಗಿದೆ.
ಬೌದ್ಧಿಕ ಸವಾಲುಗಳೊಂದಿಗೆ ವಿವಿಧ ದೈಹಿಕ ನ್ಯೂನ್ಯತೆಗಳನ್ನು ಹೊಂದಿರುವ ಮಕ್ಕಳಿಗಾಗಿ ೨೦೦೦ನೇ ಇಸವಿಯಲ್ಲಿ ಸಾಂದೀಪ್ ವೀಶೇಷ ಶಾಲೆಯನ್ನು ಸುಳ್ಯದಲ್ಲಿ ಆರಂಬಿಸಲಾಗಿತ್ತು. ಎರಡು ದಶಕಗಳಲ್ಲಿ ನೂರಾರು ವಿಶಿಷ್ಟ ಚೇತನರಿಗೆ, ತರಬೇತಿ ಶಿಕ್ಷಣ, ಚಿಕಿತ್ಸೆ ತರಬೇತಿ ನೀಡುವ ಮೂಲಕ ಬಿನ್ನ ಸಾಮರ್ಥ್ಯದ ಮಕ್ಕಳು ಎಲ್ಲರಂತೆ ಸಮಾಜದಲ್ಲಿ ಬದುಕುವಂತಾಗಬೇಕು ಎನ್ನುವ ದೃಷ್ಠಿಕೋನದಿಂದ ಎಂ.ಬಿ ಸದಾಶಿವರವರು ಆರಂಭಿಸಿದ ಈ ಶಿಕ್ಷಣ ಸಂಸ್ಥೆಯಲ್ಲಿ ತೀರಾ ಬಡಕುಟುಂಬದಿಂದ ಬಂದ ಈ ದಿವ್ಯಾಂಗ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದರಿಂದ ಮಧ್ಯಾಹ್ನದ ಬಿಸಿಯೂಟ ಹಾಲು ನೀಡಲಾಗುತ್ತಿದೆ. ವಿಶೇಷ ತರಬೇತು ಪಡೆದ ಶಿಕ್ಷಕರ ತಂಡ ಯೋಗ ಸಂಗೀತ ಶಿಕ್ಷಕರಿದ್ದು ಸರ್ವಾಂಗೀಣ ಬೆಳವಣಿಗೆಯ ಪ್ರಯತ್ನ ಮಾಡಲಾಗುತ್ತಿದೆ.ಇದೀಗ ರೂ.೧.೪೫ ಕೋಟಿ ವೆಚ್ಚದಲ್ಲಿ ಸರ್ವಸಜ್ಜಿತ ನೂತನ ಕಟ್ಟಡ ನಿರ್ಮಾಣಗೊಂಡಿದ್ದು ಫಿಸಿಯೋ ತೆರಪಿ, ವಾಕ್ ಶ್ರವಣ
ತರಬೇತಿ, ಮಾನಸಿಕ ಆರೋಗ್ಯ ಕೇಂದ್ರ ಹಾಗೂ ವಿದೇಶದಿಂದ ಆಮದು ಮಾಡಿದ ಯಂತ್ರದ ಮೂಲಕ ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಬದುಕು ರೂಪಿಸಲು ತರಬೇತಿ ನೀಡಿ ಬಿನ್ನ ಸಾಮರ್ಥ್ಯದ ಮಕ್ಕಳು ಇತರರಂತೆ ಸ್ವಾವಲಂಭಿ ಜೀವನ ನಡೆಸಬೇಕು ಎನ್ನುವುದು ಎಂ.ಬಿ ಸದಾಶಿವ ರವರ ಕನಸಾಗಿತ್ತು , ಕಲ್ಪನೆಯ ಕನಸಿಗೆ ಮುನ್ನುಡಿ ಬರೆದು ಆರಂಭಿಸಿದ ಸಂಸ್ಥೆ ಇಂದು ರಾಜ್ಯದಲ್ಲಿಯೇ ಮಾದರಿ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದೆ, ಇಂದು ಬಿನ್ನ ಸಾಮರ್ಥ್ಯದ ಮಕ್ಕಳಿಗೆಂದೇ ಶಿಕ್ಷಣ ಸಂಸ್ಥೆಯ ಬೃಹತ್ ಕಟ್ಟಡ ಲೋಕಾರ್ಪಣೆಗೆ ಸಿದ್ದವಾಗಿ ನಿಂತಿದೆ.

ರಾಜ್ಯ