ಪವನ್ ಪಿಂಡಿಮನೆ ಸಿ.ಎ.ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

ಪವನ್ ಪಿಂಡಿಮನೆ ಸಿ.ಎ.ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

ನವದೆಹಲಿಯ ಇನ್ ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ಸ್ ಆಫ್ ಇಂಡಿಯಾ ಇವರು ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಪವನ್ ಪಿಂಡಿಮನೆ ತೇರ್ಗಡೆ ಯಾಗಿದ್ದಾರೆ.
ಪವನ್ ರವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ, ಪ್ರೌಢ ಶಿಕ್ಷಣವನ್ನು ಕೆವಿಜಿ ಆಂಗ್ಲಮಾಧ್ಯಮ ಪ್ರೌಢ ಶಾಲೆ ಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಸುಳ್ಯ ಎನ್ನೆಂಪಿಯುಸಿಯಲ್ಲಿ ಪದವಿ ಹಾಗೂ ಸಿ.ಎ ತರಬೇತಿಯನ್ನು ಮಂಗಳೂರಿನಲ್ಲಿ ಪಡೆದರು.
ಪ್ರಸ್ತುತ ಬೆಂಗಳೂರಿನ ಆಯನ ರಿನಿವೇಬಲ್ ಪವರ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದಾರೆ. ಇವರು ಅರಂತೋಡು ಗ್ರಾಮದ ಪಿಂಡಿಮನೆ ನಿವಾಸಿ, ಸುಳ್ಯದ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯೋಗಿಯಾಗಿರುವ ಹೊನ್ನಪ್ಪ ಗೌಡ ಪಿಂಡಿಮನೆ ಹಾಗೂ ಶ್ರೀಮತಿ ಮೋಹನಾಂಗಿಯವರ ಪುತ್ರ.

ರಾಜ್ಯ