ವೈಭವದಿಂದ ನಡೆದ    ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ

ವೈಭವದಿಂದ ನಡೆದ ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ

ಜ.29.ರಿಂದ ಜ.31 ರ ವರೆಗೆ ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ವಾರ್ಷಿಕ ಉತ್ಸವ ನಡೆಯಿತು ಜ.29 ರವಿವಾರ ಸಂಜೆ ಗೂದೂಳಿ ಲಗ್ನದಲ್ಲಿ ಶ್ರೀ ಕ್ಷೇತ್ರ ಗುತ್ಯಮ್ಮ ದೇವಿ ಮತ್ತು ಸಹ ಪರಿವಾರ ದೈವಗಳ ಕವಾಟ ಉದ್ಘಾಟನೆ, ದೇವರ ಪ್ರಾರ್ಥನೆ,ವಾಸು ಪೂಜೆ, ಕ್ಷೇತ್ರ ಶುದ್ದೀಕರಣ ನಡೆದು ಜ.30 ರಂದು ಬೆಳಿಗ್ಗೆ ಗಂಟೆ 8.00ರಿಂದ ಸ್ವಸ್ತಿ ಪುಣ್ಯಾಹವಾಚನೆ ನಿರ್ಮಾಲ್ಯ ವಿಸರ್ಜನೆ ಪೂಜೆ, ಪ್ರತ್ಯೇಕ ಪ್ರತ್ಯೇಕ ಕಲಶಾಧಿವಾಸ, ಪ್ರಧಾನ ಹೋಮ, ಪಂಚಾಮೃತ ಸಹಿತ ಕಲಶಾಭಿಷೇಕ, ದೇವತಾರಾಧನೆ,ದೈವರಾಧನೆ, ಪ್ರಸನ್ನ ಪೂಜೆ, ರಾತ್ರಿ ಸಂಧ್ಯಾಕಾಲ ದುರ್ಗಾನಮಸ್ಕಾರ ಪೂಜೆ, ಪ್ರಸಾದ ವಿತರಣೆ ಮಾಡಲಾಯಿತು.


ನಾಗ ದೇವರಲ್ಲಿ ಪುಣ್ಯಾಹವಾಚನೆ, ಪವಮಾನಯಾಗ,
ನವಕ ಪ್ರಧಾನ, ಪಂಚಾಮೃತ ಸಹಿತ ಕಲಶಾಭಿಷೇಕ,
ರಕ್ರೇಶ್ವರಿ ಆರಾಧನೆ, ಆಶ್ಲೇಷ ಬಲಿ ಪೂಜೆ,
ನಾಗದೇವರ ತಂಬಿಲ, ಪ್ರಸನ್ನ ಪೂಜೆ ನೆರವೇರಿತು, ಜ.31 ರಂದು ಬೆಳಗ್ಗೆ ಗಂಟೆ 8.00ರಿಂದ ಸ್ವಸ್ತಿ ಪುಣ್ಯಾಹವಾಚನೆ, ನಿರ್ಮಾಲ್ಯ ವಿಸರ್ಜನೆ,ರುದ್ರ ಹೋಮ, ನವಗ್ರಹ ಹೋಮ,ಚಂಡಿಕಾ ಹೋಮ-ಪೂರ್ಣಾಹುತಿ ನಡೆದು ಮದ್ಯಾಹ್ನ 12.30ಕ್ಕೆ
ದೈವ ದೇವರ ಆರಾಧನೆ ನಡೆಸಲಾಯಿತು, ಮಧ್ಯಾಹ್ನ ಗಂಟೆ 1.00ರಿಂದ ಅನ್ನಸಂತರ್ಪಣೆ ಸಾಯಂಕಾಲ ಗಂಟೆ 5.30ಕ್ಕೆ ಸಂಧ್ಯಾಕಾಲ ಗುತ್ಯಮ್ಮ ದೇವಿಗೆ ರಂಗ ಪೂಜಾ ಸೇವೆ ನೆರವೇರಿತು.

ಸಾವಿರಾರು ಭಕಾಧಿಗಳು ಶ್ರೀ ದೇವಿ ಗುತ್ಯಮ್ಮನವರು, ಶ್ರೀ ಬ್ರಹ್ಮರು,ನಾಗ ನಾಗಬ್ರಹ್ಮ, ಪಿಲಿಚಾಮುಂಡಿ, ಧೂಮಾವತಿ,ಅಣ್ಣಪ್ಪ ಪಂಜುರ್ಲಿ, ಸಿರಿ ಕುಮಾರರು,ಕಲ್ಲುರ್ಟಿ ಪಂಜುರ್ಲಿ,ಬಳ್ಳಾಳ ಬಳ್ಳಾಲ್ತಿ,
ನಂದಿ ಕೋಣ, ಕ್ಷೇತ್ರಪಾಲ,ನೀಚ ಬೊಬ್ಬರ್ಯ
ಶ್ರೀ ಗುತ್ಯಮ್ಮ ದೇವಿಯ ಪ್ರಾಕಾರದಲ್ಲಿರುವ ಸ್ಥಾನದಲ್ಲಿ ಭಕ್ತಿ ಯಿಂದ ಪೂಜಾಕಾರ್ಯದಲ್ಲಿ ಭಾಗವಹಿಸಿದ್ದರು. ಶ್ರೀ ಗುತ್ಯಮ್ಮ ದೇವಸ್ಥಾನದ ಧರ್ಮದರ್ಶಿ, ಕುರುಂಜಿ ಡಾ ಕೆ ವಿ ರೇಣುಕಾ ಪ್ರಸಾದ್, ಡಾ ಜ್ಯೋತಿ ರೇಣುಕಾ ಪ್ರಸಾದ್ ಡಾ.ಅಭಿಜ್ಞಾ ಆರ್.ಪ್ರಸಾದ್, ಮೌರ್ಯ ಕುರುಂಜಿ, ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಉಜ್ವಲ್ ಊರುಬೈಲು, ಮಾಧವ ಬಿ.ಟಿ, ಪ್ರಸನ್ನ ಕಲ್ಲಾಜೆ, ಭವಾನಿಶಂಕರ ಅಡ್ತಲೆ, ಶಿವರಾಮ‌ ಕೇರ್ಪಳ, ನಾಗೇಶ್ ಕೊಚ್ಚಿ, ಸುಜಿತ್, ಜಯಪ್ರಕಾಶ್, ವೇಣುಗೋಪಾಲ್, ಯಶೋಧಾ ರಾಮಚಂದ್ರ, ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ರಾಜ್ಯ