ಮಂಜೇಶ್ವರ ಶಾಲಾ ವಾಹನಕ್ಕೆ ಬೈಕ್ ಢಿಕ್ಕಿ: ಇಬ್ಬರು ವಿದ್ಯಾರ್ಥಿಗಳ ಧಾರುಣ ಸಾವು.

ಮಂಜೇಶ್ವರ ಶಾಲಾ ವಾಹನಕ್ಕೆ ಬೈಕ್ ಢಿಕ್ಕಿ: ಇಬ್ಬರು ವಿದ್ಯಾರ್ಥಿಗಳ ಧಾರುಣ ಸಾವು.

ಮಂಜೇಶ್ವರ ಸಮೀಪದ ಮೀಂಜ ಬಾಳಿಯೂರು ಬಳಿ ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಧಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಬೈಕಿನಲ್ಲಿದ್ದ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಬೈಕ್ ಶಾಲಾ ಬಸ್ ಗೆ ಡಿಕ್ಕಿಯಾಗಿದೆ , ಬೈಕ್ ನಲ್ಲಿ ಮೂವರು ವಿದ್ಯಾರ್ಥಿಗಳು ಸವಾರಿ ಮಾಡುತ್ತಿದ್ದು ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸ್ಪಟ್ಟಿದ್ದಾನೆ ಮೃತಪಟ್ಟವರನ್ನು ಮೀಯಪದವಿನ ಪ್ರೀತೇಶ್ ಶೆಟ್ಟಿ (19) ಅಭಿಷೇಕ್ (19) ಎಂದು ತಿಳಿದು ಬಂದಿದೆ. ಮೃತಪಟ್ಟವರು ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಅತ್ಮೀಯ ಗೆಳೆಯರಾಗಿದ್ದರು ಎಂದು ಹೇಳಲಾಗಿದೆ‌.

ರಾಜ್ಯ