ಬೊಲೇರೊ ವಾಹನದಲ್ಲಿ ಅಕ್ರಮ ದನ ಸಾಗಾಟ : ಪ್ರಕರಣ ದಾಖಲು.

ಬೊಲೇರೊ ವಾಹನದಲ್ಲಿ ಅಕ್ರಮ ದನ ಸಾಗಾಟ : ಪ್ರಕರಣ ದಾಖಲು.


ಹೆಬ್ರಿ: ಮಹೀಂದ್ರ ಬೋಲೆರೋ ದನಗಳನ್ನು ವಾಹನದಲ್ಲಿ ಯದ್ವಾ ತದ್ವಾ ತುಂಬಿಸಿಕೊಂಡು ಸಾಗಾಟ ಮಾಡುವ ಸಂದರ್ಭದಲ್ಲಿ ಹೆಬ್ರಿ ಠಾಣಾ ಪೊಲೀಸರು ವಾಹನವನ್ನು ಬೆನ್ನಟ್ಟಿದಾಗ ಕಳ್ಳರು ಹೆಬ್ರಿಯ ಬಚ್ಚಪ್ಪು ಜಂಕ್ಷನ್ ಬಳಿ ತಪ್ಪಿಸಿಕೊಂಡ ಘಟನೆ ಗುರುವಾರ ಮುಂಜಾನೆ ರಾತ್ರಿ 4ಗಂಟೆಗೆ ಸಂಭವಿಸಿದೆ.

ನಾಡ್ಪಾಲು ಗ್ರಾಮದ ಸೀತಾನದಿ ಕೈಕಂಬ ಎಂಬಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುವ ವೇಳೆ ಅತೀ ವೇಗದಲ್ಲಿ ನಾಡ್ಪಾಲು ಕಡೆಯಿಂದ ಕೆ ಎ 05 ಎಂ ಎಫ್ 6137 ನಂಬ್ರ ನೋಂದಾಯಿತ ವಾಹನವನ್ನು ನಿಲ್ಲಿಸುವಂತೆ ಪೊಲೀಸರು ಸೂಚನೆ ಕೊಟ್ಟಾಗಲೂ ಚಾಲಕ ನಿಲ್ಲಿಸದೆ, ವೇಗವಾಗಿ ಮುದ್ರಾಡಿ ಕಡೆ ಚಲಾಯಿಸಿದನು. ಆ ರಭಸದಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ನಿಂತ ವಾಹನದಿಂದ 3 ಮಂದಿ ಕಳ್ಳರು ಇಳಿದು ಕತ್ತಲೆಯಲ್ಲಿ ಕಾಡಿಗೆ ಓಡಿ ಪರಾರಿಯಾಗಿರುತ್ತಾರೆ.5 ಜಾನುವಾರುಗಳನ್ನು ಎಲ್ಲಿಂದಲೋ ಕಳವು ಮಾಡಿ ಹಿಂಸಾತ್ಮಕವಾಗಿ ಕುತ್ತಿಗೆಗೆ ಹಗ್ಗದಿಂದ ಕಟ್ಟಿ ಕಸಾಯಿಖಾನೆಗೆ ಸಾಗಿಸುವುದು ಕಂಡು ಬಂದಿದೆ. ಹೆಬ್ರಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.

ವರದಿ:ಬಾಲಚಂದ್ರ ಮುಗ್ರೋಡಿ

ರಾಜ್ಯ