
ಬೈಕ್ ಮತ್ತು ಆಪೆ ರಿಕ್ಷಾ ಪರಸ್ಪರ ಡಿಕ್ಕಿಯಾಗಿ ಯುವಕ ಗಂಭೀರ ಗಾಯಗೊಂಡಿರುವ ಘಟನೆ ಜ.7 ರಂದು ನಡೆದಿದೆ. ಗಾಯಾಳು ಸುಳ್ಯ ಕುರುಂಜಿ ಗುಡ್ಡೆ ಶಾಂತಪ್ಪ ಎನ್ನುವವರ ಪುತ್ರ ಸಚಿನ್ ಕುಮಾರ್ ಎಂದು ತಿಳಿದುಬಂದಿದೆ. ಸುಳ್ಯ ತಾಲೋಕು ಪಂಚಾಯತ್ ಸಮೀಪದಲ್ಲಿ ಕುರುಂಜಿಭಾಗ್ ಕಡೆಯಿಂದ ಸುಳ್ಯ ಮುಖ್ಯ ರಸ್ತೆಯತ್ತ ಬರುತ್ತಿದ್ದ ಆಪೆ ರಿಕ್ಷಾ ಮತ್ತು ಸುಳ್ಯದಿಂದ ಕುರುಂಜಿಭಾಗ್ ಕಡೆಗೆ ಹೋಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿಯಾಗಿದೆ.



ಡಿಕ್ಕಿಯಾದ ರಬಸಕ್ಕೆ ಬೈಕ್ ಸವಾರನ ತಲೆ ರಸ್ತೆಗೆ ಅಪ್ಪಳಿಸಿ ತಲೆಗೆ ಗಂಭೀರ ಗಾಯವಾಗಿದೆ,ಗಾಯಗೊಂಡ ಸಚಿನ್ ರನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗುತ್ತಿದೆ. ಗಾಯಾಳು ಸುಳ್ಯ ವಿಶ್ವಾಸ್ ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ
